July 15, 2026
Wednesday, July 15, 2026
spot_img

ಶ್ರೀಕೃಷ್ಣ ಮಠದ ಸುತ್ತಮುತ್ತ ಸ್ವಚ್ಛತೆಗೆ ಆಗ್ರಹ; ಅಪರ ಜಿಲ್ಲಾಧಿಕಾರಿಗೆ ಸ್ಥಳೀಯ ನಿವಾಸಿಗಳ ಮನವಿ!

ಹೊಸದಿಗಂತ ವರದಿ ಚಿತ್ರದುರ್ಗ

ಚಿತ್ರದುರ್ಗ ಶ್ರೀಕೃಷ್ಣ ಯಾದವಾನಂದ ಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ಒತ್ತಾಯಿಸಿ ದವಳಗಿರಿ ಬಡಾವಣೆ ನಿವಾಸಿಗಳು ಬುಧವಾರ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.

ಚಿತ್ರದುರ್ಗದ ಒಂದು ಧಾರ್ಮಿಕ ಕೇಂದ್ರಗಳಿಗೆ ಪ್ರಸಿದ್ಧಿ ಪಡೆದ ನಗರವಾಗಿದೆ. ಇಲ್ಲಿ ಅನೇಕ ಧಾರ್ಮಿಕ ಕೇಂದ್ರಗಳಿವೆ. ಇಂತಹ ಧಾರ್ಮಿಕ ಕೇಂದ್ರಗಳಲ್ಲಿ ಹೊಳಲ್ಕೆರೆ ರಸ್ತೆಯ ಪಕ್ಕದಲ್ಲಿರುವ ಶ್ರೀಕೃಷ್ಣ ಯಾದವಾನಂದ ಮಠವೂ ಒಂದು. ಇದು ನಗರದ ಹೊರವಲಯದ ಶಿವಮೊಗ್ಗ – ಚಿತ್ರದುರ್ಗ ಮಾರ್ಗದ ಹೆದ್ದಾರಿ ಪಕ್ಕದಲ್ಲಿದೆ. ಇದರಿಂದಾಗಿ ಈ ಮಠದ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿ ಪರಿಣಮಿಸಿದೆ ಎಂದು ದವಳಗಿರಿ ನಿವಾಸಿಗಳು ದೂರಿದರು.

ಇಲ್ಲಿಗೆ ಸುತ್ತಮುತ್ತಲಿನ ಲೇಔಟ್‌ಗಳಲ್ಲಿ ಉಂಟಾಗುವ ತ್ಯಾಜ್ಯ ಹಾಗೂ ವಿವಿಧ ಬಡಾವಣೆಗಳಲ್ಲಿ ಹಳೆಯ ಮನೆಗಳ ಗೋಡೆಯ ಮಣ್ಣು, ಮನೆಯ ಕಸ ಸೇರಿದಂತೆ ರಾಶಿ ರಾಶಿ ತ್ಯಾಜ್ಯವನ್ನು ಪ್ರತಿನಿತ್ಯ ತಂದು ಶ್ರೀಮಠದ ಮುಂದಿನ ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾಗುತ್ತಿದೆ. ಇದರಿಂದ ಮಠದ ಸುತ್ತಮುತ್ತಲಿನ ಪ್ರದೇಶ ಕಲುಷಿತವಾಗಿದೆ. ಶ್ರೀಮಠಕ್ಕೆ ಹೋಗಿ ಬರುವ ಭಕ್ತರು ಅನಗತ್ಯ ಕಿರಿಕಿರಿ ಅನುಭವಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ:

ಈ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ಶ್ರೀಮಠದ ಮುಂದಿನ ರಸ್ತೆಯಲ್ಲಿ ತ್ಯಾಜ್ಯ ಹಾಕುವುದನ್ನು ತಡೆಯಬೇಕು. ಅಲ್ಲದೇ ಈ ಮಾರ್ಗದಲ್ಲಿ ವೇಗವಾಗಿ ಸಾಗುವ ವಾಹನಗಳಿಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು. ನಿವೃತ್ತ ಅಧಿಕಾರಿಗಳಾದ ಬಿ.ಜಿ.ಶ್ರೀನಿವಾಸ್, ಗುರುಮೂರ್ತಿ, ನಾಗರಾಜ್, ಶ್ರೀಧರ್, ಹೊರಕೆರೆ ರಂಗಪ್ಪ, ಜಗದೀಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !