Friday, August 12, 2022

Latest Posts

ಸಾಧನೆಯ ಶಿಖರ ಏರುವವರೆಗೂ ಈ ಕಿವುಡು ಕಪ್ಪೆಗಳಂತಾಗಿ!

ಕಪ್ಪೆಗಳ ಗುಂಪು ಹೀಗೆ ಕಾಡಿನಲ್ಲಿ ವಾಕಿಂಗ್ ಹೋಗುತ್ತಿರುತ್ತವೆ. ಆಗ ಅಲ್ಲೆ ಇದ್ದ ಆಳವಾದ ಕೊಳದಲ್ಲಿ ಎರಡು ಕಪ್ಪೆಗಳು ಕಾಲು ಜಾರಿ ಬೀಳುತ್ತವೆ. ಬಾಕಿ ಉಳಿದ ಕಪ್ಪೆಗಳು ಕೊಳದ ಸುತ್ತಲು ನೆರೆದು ಕೊಳ ಎಷ್ಟು ಆಳವಾಗಿದೆ ಎಂದು ನೋಡುತ್ತವೆ. ತುಂಬಾ ಆಳವಾಗಿದ್ದರಿಂದ ಯಾವ ಕಪ್ಪೆಗೂ ಅವೆರಡು ಕಪ್ಪೆ ಬದುಕುವ ಬಗ್ಗೆ ಭರವಸೆ ಉಳಿಯುವುದಿಲ್ಲ.

“ನೀವು ತುಂಬಾ ಆಳವಾದ ಕೊಳದಲ್ಲಿ ಬಿದ್ದಿದ್ದೀರಾ, ಯಾವುದೇ ಕಾರಣಕ್ಕೂ ಬದುಕುವುದಿಲ್ಲ. ಸುಮ್ಮನೆ ಮೇಲೆ ಬರುವ ಪ್ರಯತ್ನ ಮಾಡಬೇಡಿ” ಎಂದು ಮೇಲೆ ನೆರೆದಿದ್ದ ಕಪ್ಪೆಗಳು ಕೂಗಿ ಕೂಗಿ ಹೇಳುತ್ತಿರುತ್ತವೆ.

ಆದರೆ ಕೊಳದಲ್ಲಿ ಬಿದ್ದದ್ದ ಕಪ್ಪೆಗಳು ಈ ಬಗ್ಗೆ ಲಕ್ಷ್ಯವಹಿಸದೆ ಮೇಲೆ ಬರುವ ತಮ್ಮ ಪ್ರಯತ್ನವನ್ನು ಮಾಡುತ್ತಲೇ ಇರುತ್ತವೆ. ಅಂತೂ ಪ್ರಯತ್ನಕ್ಕೆ ಫಲ ಸಿಗುತ್ತದೆ. ಕಪ್ಪೆಗಳೆರಡೂ ಕೊಳದಿಂದ ಮೇಲೆ ಬರುತ್ತವೆ.

ಆಗ ಮೇಲಿದ್ದ ಕಪ್ಪೆಗಳಿಗೆಲ್ಲ ಆಶ್ಚರ್ಯವಾಗುತ್ತವೆ “ನಾವು ಅಷ್ಟು ಹೇಳಿದರೂ ನೀವು ಕೇಳದೇ ನಿಮ್ಮ ಪ್ರಯತ್ನವನ್ನು ಮಾಡಿ ಬದುಕಿ ಬಿಟ್ಟಿರಿ. ಇದು ಹೇಗೆ ಸಾಧ್ಯವಾಯಿತು” ಎಂದು. ಆಮೇಲೆ ಗೊತ್ತಾಗುತ್ತದೆ ಅವೆರಡು ಕಪ್ಪೆಗಳಿಗೆ ಕಿವಿ ಕೇಳುತ್ತಿರಲಿಲ್ಲವೆಂದು.

ಮೇಲಿದ್ದ ಕಪ್ಪೆಗಳು ಬದುಕುವ ಭರವಸೆ ನಾಶ ಮಾಡುವ ಮಾತನ್ನಾಡುತ್ತಿರುವುದು, ಕೊಳದಲ್ಲಿ ಬಿದ್ದಿದ್ದ  ಕಿವಿ ಕೇಳದ ಕಪ್ಪೆಗಳಿಗೆ ಅದು ಪ್ರೋತ್ಸಾಹಿಸುತ್ತಿದ್ದಂತೆ ಕಾಣಿಸುತ್ತಿತ್ತಂತೆ “ನಿಮ್ಮ ಪ್ರೋತ್ಸಾಹದಿಂದಲೇ ನಾವು ಇಂದು ಬದುಕಿದೆವು” ಎಂದು ಅವೆರಡು ಕಪ್ಪೆಗಳು ಉಳಿದ ಕಪ್ಪೆಗಳಿಗೆ ಧನ್ಯವಾದ ತಿಳಿಸಿದವು.

ನೀವು ಕೂಡ ಸಾಧನೆಯ ಶಿಖರ ಏರುವವರೆಗೂ ಈ ಕಿವುಡು ಕಪ್ಪೆಗಳಂತಾಗಿ. ಭರವಸೆ ಅಳಿಸುವ ಮಾತುಗಳಿಗೆ ಕಿವಿಕೊಡಬೇಡಿ. ಒಂದು ದಿನ ನಿಮ್ಮ ಗುರಿ ತಲುಪಿ ಹಿಂದಿರುಗಿ ನೋಡಿ ಮನಬಂದಂತೆ ಮಾತನಾಡುತ್ತಿರುವವರೆಲ್ಲ ಮೂಕರಾಗಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss