ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ವಿದ್ಯಾನಗರ ಕಾಲೇಜ್‌ವೊಂದರ ವಿದ್ಯಾರ್ಥಿನಿಯ ಇಸ್ಟಾಗ್ರಾಂ ನಕಲಿ ಖಾತೆ ತೆರೆದ ಅಪರಿಚಿತ ವ್ಯಕ್ತಿ ಯುವತಿಯರ ಅಶ್ಲೀಲ ಹಾಗೂ ಪೊಲೀಸ್ ಬಗ್ಗೆ ಅವಹೇಳನಕಾರಿ ಬರೆದಿರುವ ಪೋಸ್ಟ್ ಹಾಕಿ ಅವಮಾನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನಲೆಯಲ್ಲಿ ಡಿಸಿಪಿ ಕ್ರೈಂ ಗೋಪಾಲ ಬ್ಯಾಕೋಡ್ ಹಾಗೂ ಎಸಿಪಿ ಬಲ್ಲಪ್ಪ ನಂದಗಾವಿ ಅವರ ನೇತೃತ್ವದಲ್ಲಿ ಪೊಲೀಸ್‌ರು ಕಾಲೇಜಿಗೆ ಭೇಟಿ ನೀಡಿ ಪ್ರಾಂಶುಪಾಲರಿಂದ ಕೆಲವು ಮಾಹಿತಿ ಪಡೆದಿದ್ದಾರೆ. ಅಪರಿಚಿತ ವ್ಯಕ್ತಿ ಫೇಕ್ ಖಾತೆಯಲ್ಲಿ ಹಲವು ಯುವತಿಯ ಫೋಟೋಗಳನ್ನು ಅಶ್ಲೀಲಗೊಳಿಸಿ ಪೋಸ್ಟ್ ಮಾಡಿದ್ದಾರೆ.
ಇನ್ನೊಂದು ಪೋಸ್ಟನಲ್ಲಿ ಇನ್ನೂ ಕೆಲವು ಯುವತಿಯರ ಇಸ್ಟಾಗ್ರಾಂ ಖಾತೆಯ ಮುಖ ಪುಟಗಳನ್ನು ಹಂಚಿಕೊಂಡು ಈ ಯುವತಿಯರ ಅಶ್ಲೀಲ ಚಿತ್ರಗಳನ್ನು ಹಾಕುತ್ತೇನೆ. ಹು-ಧಾ ಪೊಲೀಸರಿಗೆ ಧಮ್ ಇದ್ದರೆ ನನ್ನನ್ನು ಹಿಡಿಯಿರಿ ಎಂದು ಸವಾಲು ಹಾಕಿದ್ದಾನೆ. ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.