ಹೊಸದಿಗಂತ ಡಿಜಿಟಲ್ ಡೆಸ್ಕ್:
ಯುವಪೀಳಿಗೆ ಅತಿ ಹೆಚ್ಚು ಡಿಪೆಂಡ್ ಆಗಿರೋದು ಸಾಮಾಜಿಕ ಜಾಲತಾಣಗೆ. ಮೊಬೈಲ್ ನೋಡೋದು ಇದೇ ಕಾರಣಕ್ಕೆ. ಸಾಮಾಜಿಕ ಜಾಲತಾಣಗಳೇ ಇಲ್ಲವಾದರೆ ಮೊಬೈಲ್ ನೋಡೋದು ಕೂಡ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ಚೀನಾದಲ್ಲಿ ಇನ್ಸ್ಟಾಗ್ರಾಮ್, ಫೇಸ್‌ಬುಕ್ ಹಾಗೂ ಯುಟ್ಯೂಬ್ ಮೇಲೆ ನಿಷೇಧ ಹೇರಲಾಗಿದೆ. ಆದರೂ ಅಲ್ಲಿಯ ಜನ ಸೋಶಿಯಲ್ ಮೀಡಿಯಾ ಯಾವ ಆಪ್ ಬಳಕೆ ಮಾಡ್ತಾರೆ?
ಚೀನಾದಲ್ಲಿ ಯೂಟ್ಯೂಬ್ ಬದಲಿಗೆ ಯಾವ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತದೆ?. ಅಲ್ಲಿನ ಜನರು ಯಾವ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಾರೆ?. ಈ ಕುರಿತ ಸಂಪೂರ್ಣ ವಿವರಗಳು ಇಲ್ಲಿದೆ ಓದಿ. ಚೀನಾದಲ್ಲಿ, ಯೂಟ್ಯೂಬ್ನ ಪರ್ಯಾಯ ಆವೃತ್ತಿ ಅಥವಾ ಯೂಟ್ಯೂಬ್ ನ ವಿಭಿನ್ನ ಆವೃತ್ತಿಯನ್ನು ಬಳಸಲಾಗುತ್ತದೆ. ಇದರಲ್ಲಿ ವೀಚಾಟ್ (WeChat), Xiaohongshu (Little Red Book), Douyin, Weibo, QQ, Youku ಮತ್ತು BiliBili ಅನ್ನು ಬಳಸಲಾಗುತ್ತದೆ.
ವರದಿಗಳ ಪ್ರಕಾರ, ವೈಬೋ ಚೀನಾದ ಅತ್ಯಂತ ಜನಪ್ರಿಯ ಸೈಟ್‌ಗಳಲ್ಲಿ ಒಂದಾಗಿದೆ. ಇದನ್ನು ಚೀನಾದ ಟ್ವಿಟರ್ (X) ಎಂದು ಪರಿಗಣಿಸಲಾಗಿದೆ. ಇದನ್ನು ಸಾಮಾನ್ಯವಾಗಿ WeChat ನಂತೆ ಬಳಸಲಾಗುತ್ತದೆ.