ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಏಕಶಿಲಾ ಮೂರ್ತಿ ಪ್ರತಿಷ್ಠಾಪನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಂತ್ರಾಲಯ (Mantralaya) ಪ್ರವೇಶದ ಮುಖ್ಯ ದ್ವಾರದ ಬಳಿ ಶ್ರೀ ಅಭಯ ರಾಮನ (Sri Abhaya Ram) 36 ಅಡಿ ಎತ್ತರದ ಏಕಶಿಲಾ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

ಮಂತ್ರಾಲಯ (Mantralaya) ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳು ಕಮಲಪೀಠದಲ್ಲಿ ನವಧಾನ್ಯಗಳನ್ನು ಇರಿಸಿ ಪೂಜೆ ಮಾಡಿ ಅಭಯರಾಮ ಮೂರ್ತಿಯ ಪೂರ್ವಪ್ರತಿಷ್ಠಾಪನೆ ನೆರವೇರಿಸಿದರು. 9 ಅಡಿ ಕಮಲ ಪೀಠದ ಮೇಲೆ 36 ಅಡಿ ಎತ್ತರದ ಗ್ರೇ ಗ್ರಾನೈಟ್ ಶಿಲೆಯ ಅಭಯರಾಮ ರಾಮಮೂರ್ತಿಯನ್ನು ಇರಿಸಲಾಗಿದೆ.

2021ರ ಮಾರ್ಚ್​ ತಿಂಗಳಲ್ಲಿ ಶ್ರೀ ಅಭಯ ರಾಮನ ವಿಗ್ರಹ ಕೆತ್ತನೆ ಆರಂಭವಾಗಿತ್ತು. ವಿಗ್ರಹ ಕೆತ್ತನ ಕಾರ್ಯದ ವೇಳೆಯೇ ಆಯೋಧ್ಯೆಯಲ್ಲಿ ಶ್ರೀರಾಮ ದೇವಸ್ಥಾನ ಉದ್ಘಾಟನೆ ವೇಳೆ ಈ ರಾಮನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತದೆ ಅಂತ ಮಂತ್ರಾಲಯ ಪೀಠಾಧಿಪತಿ ಶ್ರೀ ಡಾ.ಸುಬುಧೇಂದ್ರ ತೀರ್ಥರು ಹೇಳಿದ್ದರು. ಅದರಂತೆ ಮಂತ್ರಾಲಯದ ಅಭಯರಾಮನ ಏಕಶಿಲಾ ವಿಗ್ರಹ ಪ್ರತಿಷ್ಠಾಪನೆಗೊಂಡಿದೆ.

ಶ್ರೀ ಅಭಯ ರಾಮನ 36 ಅಡಿ ಎತ್ತರದ ಏಕಶಿಲಾ ಮೂರ್ತಿ ಕೆತ್ತನೆ ಕಾರ್ಯದ ಹಿಂದೆ 10 ಜನ ಶಿಲ್ಪಿಗಳ ತಂಡದ ಶ್ರಮವಿದೆ. ಆಂಧ್ರಪ್ರದೇಶದ ಕುಪ್ಪಂನ 10 ಮಂದಿ ಶಿಲ್ಪಿಗಳ ತಂಡ ಶ್ರೀರಾಮನ ಏಕಶಿಲಾ ವಿಗ್ರಹವನ್ನು ಕೆತ್ತನೆ ಮಾಡಿದೆ.

108 ಅಡಿ ಎತ್ತರದ ಪಂಚಲೋಹದ ರಾಮನ ಪ್ರತಿಮೆ ಸ್ಥಾಪನೆ
ಮಂತ್ರಾಲಯ ಹೊರಭಾಗದ ಯಮಿಗನೂರು ರಸ್ತೆಯ ಬಳಿ ಜುಲೈ 23 ರಂದು ಆಂಧ್ರಪ್ರದೇಶದ ಜೈ ಶ್ರೀ ರಾಮ್‌ ಫೌಂಡೇಶನ್‌ ವತಿಯಿಂದ 108 ಅಡಿ ಎತ್ತರದ ಬೃಹತ್‌ ಪಂಚಲೋಹದ ರಾಮನ ಮೂರ್ತಿ ಸ್ಥಾಪನೆಗೆ ಭೂಮಿಪೂಜೆ ಸಲ್ಲಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ವರ್ಚುವಲ್ ಮೂಲಕ ಈ ಪವಿತ್ರ ಕಾರ್ಯಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಮಂತ್ರಾಲಯ ಆಡಳಿತ ಮಂಡಳಿ ಶೀಘ್ರದಲ್ಲೇ ಈ ಕಾರ್ಯವನ್ನ ಮುಗಿಸುವ ಚಿಂತನೆಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!