August 8, 2026
Saturday, August 8, 2026
spot_img

Instant | ಹಾಲಿನ ಪುಡಿಯಿಂದ ರಸಮಲಾಯಿ ಮಾಡುವುದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ರಸಮಲಾಯಿ ತಿನ್ನಬೇಕು ಅನ್ನಿಸಿದಾಗೆಲ್ಲಾ ಇನ್ಮುಂದೆ ಅಂಗಡಿಗೆ ಓಡಬೇಕಾಗಿಲ್ಲ. ಮನೆಯಲ್ಲಿರುವ ಹಾಲಿನ ಪುಡಿಯಿಂದಲೇ ಕೇವಲ 15 ನಿಮಿಷಗಳಲ್ಲಿ ಬಾಯಲ್ಲಿ ಇಟ್ಟರೆ ಕರಗುವ ಇನ್‌ಸ್ಟಂಟ್ ರಸಮಲಾಯಿ ಮಾಡಬಹುದು.

ಬೇಕಾಗುವ ಸಾಮಗ್ರಿಗಳು:

ಹಾಲಿನ ಪುಡಿ

ಮೈದಾ

ಬೇಕಿಂಗ್ ಪೌಡರ್

ಮೊಟ್ಟೆ ಅಥವಾ ಹಾಲು

ಹಾಲು

ಸಕ್ಕರೆ

ಕೇಸರಿ ಮತ್ತು ಪಿಸ್ತಾ

ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ 3 ಕಪ್ ಹಾಲು, ಸಕ್ಕರೆ ಮತ್ತು ಕೇಸರಿ ಹಾಕಿ ಚೆನ್ನಾಗಿ ಕುದಿಯಲು ಬಿಡಬೇಕು. ಇನ್ನೊಂದೆಡೆ ಹಾಲಿನ ಪುಡಿ, ಮೈದಾ, ಬೇಕಿಂಗ್ ಪೌಡರ್ ಮತ್ತು 1 ಚಮಚ ತುಪ್ಪ ಸೇರಿಸಿ, ಸ್ವಲ್ಪ ಹಾಲು ಹಾಕಿ ಮೃದುವಾಗಿ ಕಲಸಿ, ಸಣ್ಣ ಸಣ್ಣ ಉಂಡೆಗಳನ್ನು ಮಾಡಿ, ಅಂಗೈಯಲ್ಲಿ ಸ್ವಲ್ಪ ಚಪ್ಪಟೆ ಮಾಡಿ, ಕುದಿಯುತ್ತಿರುವ ಹಾಲಿನ ರಸಕ್ಕೆ ಈ ಹಾಲಿನ ಪುಡಿಯ ಬಿಲ್ಲೆಗಳನ್ನು ನೇರವಾಗಿ ಹಾಕಿ. ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ 5-7 ನಿಮಿಷ ಬೇಯಿಸಬೇಕು. ಉಂಡೆಗಳು ಉಬ್ಬಿ ಸಾಫ್ಟ್ ಆಗುತ್ತವೆ. ಬಳಿಕ ಒಲೆಯಿಂದ ಇಳಿಸಿ, ಪಿಸ್ತಾ ಚೂರುಗಳಿಂದ ಅಲಂಕರಿಸಿದರೆ, ಹಾಲಿನ ಪುಡಿ ರಸಮಲಾಯಿ ಸಿದ್ಧ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !