ರಷ್ಯಾದ ವಿಕ್ಚರಿ ಡೇ ಪರೇಡ್ ನಲ್ಲಿ ಪ್ರಧಾನಿ ಮೋದಿ ಬದಲು ರಾಜನಾಥ್​ ಸಿಂಗ್​ ಭಾಗಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದಲ್ಲಿ ಮೇ 9 ರಂದು ನಡೆಯುವ 80ನೇ ವರ್ಷಾಚರಣೆಯ ವಿಜಯ ದಿನದ ಪರೇಡ್​​ನಲ್ಲಿ(ವಿಕ್ಚರಿ ಡೇ ಪರೇಡ್)ಗೆ ಪ್ರಧಾನಿ ನರೇಂದ್ರ ಮೋದಿ ಅವರ ಬದಲಾಗಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಭಾಗಿಯಾಗುವ ಸಾಧ್ಯತೆ ಇದೆ.

ಬುಧವಾರ ಈ ಕುರಿತು ಮಾತನಾಡಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್, ಮುಂದಿನ ತಿಂಗಳು ಮಾಸ್ಕೋದಲ್ಲಿ ನಡೆಯಲಿರುವ 80ನೇ ವಿಕ್ಟರಿ ದಿನದ ವರ್ಷಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮೇ 9 ರಂದು ನಡೆಯುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಮಾಸ್ಕೋದ ರೆಡ್​ ಸ್ಕ್ವೇರ್​ನಲ್ಲಿ ನಡೆಯಲಿರುವ ವಿಕ್ಟರಿ ಪರೇಡ್​​ ವೀಕ್ಷಣೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​, ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿಂಗ್​ಪಿಂಗ್​ಗೆ ಆಹ್ವಾನ ನೀಡಿದ್ದರು.

ಕ್ಸಿ ಜಿಂಗ್​ಪಿಂಗ್​ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುವುದ ಕುರಿತು ದೃಢಪಡಿಸಿದ್ದು, ಮಾಸ್ಕೋದಲ್ಲಿ ಅವರ ಭೇಟಿ ಸಂಬಂಧ ಈಗಾಗಲೇ ಸಿದ್ಧತೆ ಸಾಗಿದೆ.ಆದರೆ, ಪ್ರಧಾನಿ ಮೋದಿ ಭಾಗಿಯಾಗುವುದಿಲ್ಲ ಎಂಬುದಾಗಿ ವರದಿಯಾಗಿದೆ.

ವಿಕ್ಟರಿ ದಿನದ ಹಿನ್ನೆಲೆ ಏನು: 1945ರ ಜನವರಿಯಲ್ಲಿ ಸೋವಿಯತ್ ಸೇನೆ ಜರ್ಮನಿಯ ವಿರುದ್ಧ ಆಕ್ರಮಣ ಪ್ರಾರಂಭಿಸಿತ್ತು. ಮೇ 9ರಂದು ಜರ್ಮನಿಯ ಕಮಾಂಡರ್ ಇನ್ ಚೀಫ್ ಶರಣಾಗತಿ ಕಾಯ್ದೆಗೆ ಸಹಿ ಹಾಕುವ ಮೂಲಕ ಯುದ್ಧ ಕೊನೆಗೊಂಡಿತ್ತು. ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ವಿರುದ್ಧ ರಷ್ಯಾ ವಿಜಯ ಸಾಧಿಸಿದ ನೆನಪಿಗಾಗಿ ಈ ವಿಕ್ಟರಿ ದಿನವನ್ನು ಆಚರಿಸಲಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!