ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಬೆಳಗ್ಗೆ ಎಂಟು ಗಂಟೆಯಿಂದಲೇ ನೆತ್ತಿ ಸುಡುವ ಸೂರ್ಯನ ಆಗಮನವಾಗುತ್ತಿದೆ.
ಜನರಿಗೆ ಹಿಂದೆಂದಿಗಿಂತಲೂ ಅತಿಯಾದ ಬಿಸಿಲಿನಿ ಎಂದು ಅನಿಸುತ್ತಿದೆ. ಈ ರಣಬೇಸಿಗೆಗೆ ಜನ ಸುಸ್ತಾಗಿದ್ದಾರೆ. ಅದರಲ್ಲಿಯೂ ರಾಯಚೂರು ಹಾಗೂ ಕಲಬುರಗಿಯಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದೆ.
ಈ ಬಿಸಿನಿಲ್ಲಿ ತಲೆ ತಿರುಗಿ ಬೀಳುವುದು, ಹೊಟ್ಟೆಯ ಸಮಸ್ಯೆಗಳು ,ಡೀ ಹೈಡ್ರೇಷನ್ ಇನ್ನಿತರ ಸಮಸ್ಯೆಗಳು ಎದುರಾಗುತ್ತಿವೆ. ಈ ಎಲ್ಲ ಸಮಸ್ಯೆಗಳು ಬರಬಾರದು ಎಂದಾದರೆ ನೀರು ಕುಡಿಯುವುದು, ಲಿಕ್ವಿಡ್ ಡ್ರಿಂಕ್‌ಗಳನ್ನು ಕುಡಿಯುವುದು ( ಸಕ್ಕರೆ ರಹಿತ) ಹಾಗೂ ಆದಷ್ಟು ನೆರಳಿನಲ್ಲಿ ಇರುವುದು ಉತ್ತಮವಾಗಿದೆ.



