ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಂತರ್ ಜಿಲ್ಲಾ ಮೋಟಾರ್ ಸೈಕಲ್ ವಾಹನ ಕಳ್ಳತನ ನಡೆಸುತ್ತಿದ್ದ ಆರೋಪಿಯನ್ನು ಉಡುಪಿ ನಗರ ಠಾಣಾ ಪೋಲಿಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಂಗ ಬಂಧನ ವಿಧಿಸಿದೆ.
ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಲೆ ಹೊಸೂರು ಗ್ರಾಮ ಗೋವಿಂದಪ್ಪ ಹೇಮಣ್ಣ ಪೂಜಾರ ಯಾನೆ ಗಿರೀಶ್ (29) ಎಂದು ಗುರುತಿಸಲಾಗಿದೆ.
2022 ರ ಜನವರಿ 1 ರಂದು ಸಾಯಿರಾಧ ಗೋಕುಲಧಾಮ ಬಳಿ ನಿಲ್ಲಿಸಿದ್ದ ಬೈಕ್ ಕಳವು ಗೈದಿದ್ದು, ಈ ಪ್ರಕರಣದಲ್ಲಿ ಆರೋಪಿಯನ್ನು ಸಿಸಿಟಿವಿ ಮತ್ತು ಸಿ.ಡಿ.ಆರ್ ನ ಆಧಾರದ ಮೇಲೆ ಬಂಧಿಸಲಾಗಿದೆ.
ಈತನು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ದೊಡ್ಡಣಗುಡ್ಡೆ, ಸೋದೆ ಮಠ್ ಬಳಿ ಕಳ್ಳತನ ನಡೆಸಿದ್ದು, ಮಂಗಳೂರಿನ ಬಂದರು ಠಾಣಾ ವ್ಯಾಪ್ತಿ, ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ, ರಾಣೆಬೆನ್ನೂರಿನಲ್ಲಿ ಕೊಲೆ ಪ್ರಕರಣದಲ್ಲಿ 7 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಬಂಧಿತನಿಂದ 2 ಲಕ್ಷ ರೂಪಾಯಿ ಮೌಲ್ಯದ 5 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಅವರ ಆದೇಶದಂತೆ, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಹಾಗು ಡಿವೈಎಸ್ಪಿ ಸುಧಾಕರ ಅವರ ನಿರ್ದೇಶನದಲ್ಲಿ ನಗರ ಠಾಣಾ ನಿರೀಕ್ಷಕ ಪ್ರಮೋದ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಗರ ಠಾಣಾ ತನಿಖೆ ಉಪನಿರೀಕ್ಷಕ ವಾಸಪ್ಪ ನಾಯ್ಕ್, ಸಿಬ್ಬಂದಿಯವರಾದ ಎ.ಎಸ್.ಐ ಜಯಕರ್, ಸತೀಶ್ ಬೆಳ್ಳೆ, ಕಿರಣ್, ಹೇಮಂತ್, ಶಿವಕುಮಾರ್ ಮತ್ತು ತಾಂತ್ರಿಕ ವಿಭಾಗದ ದಿನೇಶ್ ಭಾಗಿಯಾಗಿದ್ದರು