ನ.17ರಿಂದ ಶಿವಮೊಗ್ಗದಲ್ಲಿ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿ ಆರಂಭ

ಹೊಸದಿಗಂತ ವರದಿ ಶಿವಮೊಗ್ಗ :

ದೇಶೀಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಹಿಳಾ ಕ್ರಿಕೆಟ್ ಆಟಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಿಸಿಸಿಐ ದೇಶದ 15  ವರ್ಷ ವಯೋಮಿತಿಯ ಅಂತಾರಾಜ್ಯ ಕ್ರಿಕೆಟ್ ಪಂದ್ಯಾವಳಿಯನ್ನು ಈ ಬಾರಿಯೂ ಆಯೋಜಿಸಿದ್ದು ನ.17 ರಿಂದ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಶನ್ ಶಿವಮೊಗ್ಗ ವಲಯದ ಸಂಚಾಲಕ ಎಚ್. ಎಸ್. ಸದಾನಂದ ತಿಳಿಸಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 36 ತಂಡಗಳು ರಾಜ್ಯದ ವಿವಿಧ ರಾಜ್ಯಗಳಲ್ಲಿ ಆಡಲಿವೆ. ಈ ಪೈಕಿ ಎಫ್ ಗುಂಪಿನ ೬ ತಂಡಗಳು ಶಿವಮೊಗ್ಗದ ಕೆಸಿಎ ಹಾಗು ಎನ್ ಇಎಸ್ ಕ್ರೀಡಾಂಗಣ ದಲ್ಲಿ ನಡೆಯಲಿವೆ ಎಂದರು.
ಎಫ್ ಗುಂಪಿನಲ್ಲಿ ಬರೋಡಾ, ಹಿಮಾಚಲ ಪ್ರದೇಶ, ಮಣಿಪುರ, ಪಾಂಡಿಚೆರಿ, ಪಂಜಾಬ್ ಹಾಗೂ ಉತ್ತರ ಪ್ರದೇಶ ತಂಡಗಳು ಆಡಲಿವೆ. ಕರ್ನಾಟಕ ತಂಡ ಇ ಗುಂಪಿನಲ್ಲಿ ಆಡುತ್ತಿದ್ದು ಈ ಗುಂಪು ದೆಹಲಿಯಲ್ಲಿ ಆಡುತ್ತಿವೆ. 35 ಓವರ್ ಗಳ ಪಂದ್ಯ ಇದಾಗಿದ್ದು, ಒಂದು ದಿನ ಲಿಮಿಟೆಡ್ ಓವರ್ ನಲ್ಲಿ ನಡೆಸಲಾಗುತ್ತದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!