ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಜಿಲ್ಲೆಯ ಮಲ್ಪೆ ಕಡಲ ತೀರದಲ್ಲಿ ಚಿನ್ನ ಪತ್ತೆಯಾಗುತ್ತಿದೆಯಾ?
ಉತ್ತರ ಸ್ಪಷ್ಟವಿಲ್ಲದಿದ್ದರೂ ಈ ಭಾಗದಲ್ಲಿ ಚಿನ್ನಕ್ಕಾಗಿ ಹುಡುಕಾಟದಲ್ಲಿ ತೊಡಗಿದವರು ಮಾತ್ರ ಕಂಡುಬರುತ್ತಿದ್ದಾರೆ.
ಕಡಲ ತೀರದಲ್ಲಿ ದಿನವಿಡೀ ಶೋಧನೆಯಲ್ಲಿ ತೊಡಗಿರುವ ಕೆಲವು ಮಂದಿಯನ್ನು ವಿಚಾರಿಸಿದಾಗ ತಾವು ಕಡಲಿನ ಬದಿಯಲ್ಲಿ ಸಿಗುವ ಚಿನ್ನಕ್ಕಾಗಿ ಹುಡುಕಾಟ ನಡೆಸುತ್ತಿದ್ದೇವೆ ಎನ್ನುತ್ತಾರೆ. ಕಡಲ ತಡಿಗೆ ಬರುವ ಪ್ರವಾಸಿಗರು ಇಲ್ಲಿ ಸಮುದ್ರಕ್ಕಿಳಿಯುವ ವೇಳೆ ಆಭರಣಗಳು, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಇದೇ ಸಂದರ್ಭ ಭಾರೀ ಅಲೆಗಳು ತೀರಕ್ಕೆ ಅಪ್ಪಸುತ್ತಲೇ ಇರುವುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಕಳೆದುಕೊಂಡ ವಸ್ತುಗಳು ಮರಳಿನಲ್ಲಿ ಹುದುಗುತ್ತವೆ. ಹಾಗಿದ್ದೂ ಇಲ್ಲಿ ಕೆಲವು ಮಂದಿ ಹುಡುಕಾಟ ಮುಂದುವರಿಸಿದ್ದಾರೆ. ಚಿನ್ನ ಸಿಕ್ಕಿದೆಯಾ ಎಂಬ ಪ್ರಶ್ನೆಗೆ ಮಾತ್ರ ಯಾರಿಂದಲೂ ಸಿಕ್ಕಿದೆ ಎಂಬ ಉತ್ತರ ಮಾತ್ರ ಬಂದಿಲ್ಲ!
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ