Interesting | ಪೆನ್ಸಿಲ್ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? ಗ್ರ್ಯಾಫೈಟ್ ಅಂದ್ರೆ ಏನು ಗೊತ್ತಿದ್ಯಾ?

ಮಕ್ಕಳು ಮೊದಲು ಪೆನ್ಸಿಲ್ ನಿಂದ ಬರೆಯಲು ಕಲಿಯುತ್ತಾರೆ. ಅದರ ನಂತರ, ಅನುಭವ ಹೆಚ್ಚಾದಂತೆ ಪೆನ್ ಮೂಲಕ ಬರೆಯಲು ಆರಂಭಿಸುತ್ತಾರೆ. ಮಕ್ಕಳು ಮಾತ್ರವಲ್ಲ, ದೊಡ್ಡವರು ಕೂಡ ಪೆನ್ಸಿಲ್ ಬಳಸುತ್ತಾರೆ. ಈ ಪೆನ್ಸಿಲ್ ಇತಿಹಾಸ ನಿಮಗೆ ಗೊತ್ತಾ? ಇಲ್ಲಿದೆ ನೋಡಿ.

ಪೆನ್ಸಿಲ್‌ಗಳು ಗ್ರ್ಯಾಫೈಟ್ ಎಂದು ಕರೆಯಲ್ಪಡುವ ಘನ ಇಂಗಾಲದ ಒಂದು ರೂಪವನ್ನು ಹೊಂದಿರುತ್ತವೆ. ಗ್ರ್ಯಾಫೈಟ್ ಪೆನ್ಸಿಲ್ ಅನ್ನು ಮೊದಲು 1600 ರ ದಶಕದಲ್ಲಿ ಅಭಿವೃದ್ಧಿಪಡಿಸಲಾಯಿತು.

1564 ರಲ್ಲಿ ಇಂಗ್ಲೆಂಡ್‌ನ ಬರೋಡೇಲ್‌ನಲ್ಲಿ ದೊಡ್ಡ ಗ್ರ್ಯಾಫೈಟ್ ನಿಕ್ಷೇಪದ ಆವಿಷ್ಕಾರದ ನಂತರ ಗ್ರ್ಯಾಫೈಟ್ ಬಳಕೆ ವ್ಯಾಪಕವಾಯಿತು. ಸೀಸಕ್ಕಿಂತ ಗಾಢವಾದ ಗುರುತು ಬಿಡುವ ಈ ಖನಿಜ ಅಪಾರ ಮೆಚ್ಚುಗೆ ಪಡೆಯಿತು. ಈ ಖನಿಜವು ತುಂಬಾ ಮೃದು ಮತ್ತು ದುರ್ಬಲವಾಗಿದ್ದು, ಅದಕ್ಕೆ ಒಂದು ಧಾರಕದ ಅಥವಾ ಹಿಡಿದಿಟ್ಟುಕೊಳ್ಳುವ ವಸ್ತುವಿನ ಅಗತ್ಯವಿತ್ತು. ಮೂಲತಃ, ಗ್ರ್ಯಾಫೈಟ್ ಕೋಲುಗಳನ್ನು ದಾರದಲ್ಲಿ ಸುತ್ತಿಡಲಾಗುತ್ತಿತ್ತು. ನಂತರ, ಗ್ರ್ಯಾಫೈಟ್ ಅನ್ನು ಟೊಳ್ಳಾದ ಮರದ ಕೋಲುಗಳ ಒಳಗಿರಿಸಲಾಗುತಿತ್ತು. ಇದೆ ವಿಧಾನವನ್ನು ಪೆನ್ಸಿಲ್ ನಲ್ಲಿ ಅನುಸರಿಸಿದ್ದರಿಂದ, ಮರದ ಕವಚದ ಪೆನ್ಸಿಲ್ ನ ಉಗಮವಾಯಿತು.

ಗ್ರ್ಯಾಫೈಟ್ ಹೆಸರು ಬರಲು ಕಾರಣ: 1600 ರ ದಶಕದಲ್ಲಿ, ರಸಾಯನಶಾಸ್ತ್ರವು ಇನ್ನೂ ಶೈಶವಾವಸ್ಥೆಯಲ್ಲಿದ್ದ ಕಾರಣ, ಈ ಖನಿಜದ ರಾಸಾಯನಿಕ ಸ್ವರೂಪ ಯಾರಿಗೂ ತಿಳಿದಿರಲಿಲ್ಲ. ಈ ಖನಿಜವು ಗಾಢ ಬಣ್ಣವನ್ನು ಹೊಂದಿತ್ತು, ಜನರು ಇದನ್ನು “ಕಪ್ಪು ಸೀಸ” ಎಂದು ಕರೆಯಲು ಪ್ರಾರಂಭಿಸಿದರು. 1779 ರಲ್ಲಿ, ಜರ್ಮನ್ ರಸಾಯನಶಾಸ್ತ್ರಜ್ಞ ಕೆಡಬ್ಲ್ಯೂ ಸ್ಕೀಲ್ ಅಂತಿಮವಾಗಿ ಪೆನ್ಸಿಲ್ ಸೀಸವು ಶುದ್ಧ ಇಂಗಾಲದಿಂದ ಕೂಡಿದೆ ಎಂದು ನಿರ್ಧರಿಸಿದರು. ಒಂದು ದಶಕದ ನಂತರ, ಎಜಿ ವರ್ನರ್ ಈ ಇಂಗಾಲದ ವಸ್ತುವಿಗೆ ಹೊಸ ಹೆಸರು ಕೊಡಬೇಕು ಎಂದು ನಿರ್ಧರಿಸಿ “ಬರೆಯಲು” ಎಂಬ ಅರ್ಥವಿರುವ ಗ್ರೀಕ್ ಪದ “ಗ್ರಾಫೈನ್” ಅನ್ನು ಆಧರಿಸಿ “ಗ್ರ್ಯಾಫೈಟ್” ಎಂಬ ಹೆಸರನ್ನು ನೀಡಿದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!