ʼಸರ್ಕಾರಿ ಯೋಜನೆಗಳಿಗೆ ಅಡ್ಡಿಪಡಿಸುತ್ತಿದ್ದಾರೆʼ: ದೆಹಲಿ ಲೆ.ಗವರ್ನರ್‌ ವಿರುದ್ಧ ಕೇಜ್ರಿವಾಲ್‌ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೆಹಲಿ ಮುಖ್ಯಮಂತ್ರಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು ಲೆಫ್ಟಿನೆಂಟ್‌ ಗವರ್ನರ್ ಆಪ್ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ತನ್ನನ್ನು ನಿಂದಿಸುವ ಮೂಲಕ, ಲೆ.ಗವರ್ನರ್ ಸಕ್ಸೇನಾ ಅವರು ದೆಹಲಿಯ ಎರಡು ಕೋಟಿ ಜನರ ಜನಾದೇಶವನ್ನು ಅವಮಾನಿಸುತ್ತಿದ್ದಾರೆ ಕೇಜ್ರಿವಾಲ್ ಎಂದು ಹೇಳಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಕೇಜ್ರಿವಾಲ್ ಅವರು ತಮ್ಮ ಸರ್ಕಾರದ ಮೊಹಲ್ಲಾ ಚಿಕಿತ್ಸಾಲಯಗಳು ಮತ್ತು ಶಾಲೆಗಳನ್ನು ಮುಂದಿನ ಗುರಿಯಾಗಿಸಲಾಗುತ್ತದೆ ಎಂದಿದ್ದು ಅಕ್ಟೋಬರ್ 31 ರ ನಂತರ ಉಚಿತ ಯೋಗ ತರಗತಿಗಳನ್ನು ನಡೆಸುವ ‘ದಿಲ್ಲಿ ಕಿ ಯೋಗಶಾಲಾ’ ಯೋಜನೆಯ ವಿಸ್ತರಣೆಯನ್ನು ಲೆ.ಗವರ್ನರ್ ಇನ್ನೂ ಅನುಮೋದಿಸಿಲ್ಲ ಎಂದು ಆರೋಪಿಸಿದ್ದಾರೆ
ಆದಾಗ್ಯೂ, ಕಾರ್ಯಕ್ರಮವನ್ನು ಮುಂದುವರಿಸಲು ಅನುಮತಿ ಕೋರಿ ಸರ್ಕಾರದಿಂದ ಯಾವುದೇ ಕಡತವನ್ನು ಸಕ್ಸೇನಾ ಅವರ ಕಚೇರಿ ಸ್ವೀಕರಿಸಿಲ್ಲ ಎಂದು ಲೆ.ಗವರ್ನರ್ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

“ಲೆ.ಗವರ್ನರ್‌ ಬಳಸುವ ರೀತಿಯ ಭಾಷೆ ಕೆಲವೊಮ್ಮೆ ನಿಂದನೀಯವಾಗಿದೆ ಎಂದು ನಾನು ಗಮನಿಸಿದ್ದೇನೆ. ಆದರೆ, ನನಗೆ ಅದರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಅರವಿಂದ್ ಕೇಜ್ರಿವಾಲ್ ಮುಖ್ಯವಲ್ಲ, ಲೆ.ಗವರ್ನರ್ ಕೇಜ್ರಿವಾಲ್‌ಗೆ ಏನು ಹೇಳುತ್ತಾರೆ ಎಂಬುದು ನಿಜವಾಗಿಯೂ ವಿಷಯವಲ್ಲ. ದೆಹಲಿಯ ಜನರಿಗೆ ಉತ್ತಮ ಸೇವೆ ಸಲ್ಲಿಸುವುದು ಅವರ ಏಕೈಕ ಮಹತ್ವಾಕಾಂಕ್ಷೆಯಾಗಿದೆ” ಎಂದಿರುವ ಅವರು ತಮ್ಮ ವಿರುದ್ಧ ಇಂತಹ ಭಾಷೆಯನ್ನು ಬಳಸುವ ಮೂಲಕ ಲೆ.ಗವರ್ನರ್ ಜನರ ಆದೇಶವನ್ನು ಅವಮಾನಿಸಿದ್ದಾರೆ ಎಂದು ಹೇಳಿದ್ದಾರೆ.

“ಆದರೆ ಬೇಸರದ ಸಂಗತಿಯೆಂದರೆ ಲೆ.ಗವರ್ನರ್ ಅವರು ನನ್ನನ್ನು ನಿಂದಿಸುತ್ತಿಲ್ಲ ಆದರೆ ದೆಹಲಿಯ ಮುಖ್ಯಮಂತ್ರಿಯನ್ನು ನಿಂದಿಸುತ್ತಿದ್ದಾರೆ. ಇದು ಸಾಂವಿಧಾನಿಕ ಹುದ್ದೆಯಾಗಿದೆ. ದೆಹಲಿಯ ಸಿಎಂ ದೆಹಲಿಯ ಎರಡು ಕೋಟಿಗೂ ಹೆಚ್ಚು ಜನರ ಸಿಎಂ. ಅರವಿಂದ್ ಕೇಜ್ರಿವಾಲ್ ಗೆ ಈ ಅವಕಾಶ ನೀಡಿದ ಎರಡು ಕೋಟಿ ಜನರನ್ನೂ ಸಿಎಂ ನೀವು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಿ” ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

“ಈ ಜನರು ನನಗೆ ಮತ್ತು ನನ್ನ ಪಕ್ಷಕ್ಕೆ ನೀಡಿದ ಜನಾದೇಶವನ್ನು ಸಹ ನೀವು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ದೆಹಲಿಯ ಜನರು ಇದಕ್ಕೆ ಅರ್ಹರಲ್ಲ. ಅಲ್ಲದೆ, ನಿಂದನೀಯ ಭಾಷೆಯನ್ನು ಬಳಸುವುದರಿಂದ ಯಾವುದೇ ಪ್ರಯೋಜನವಾಗದು” ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಆದರೆ ಈ ಕುರಿತು ಲೆ.ಗವರ್ನರ್ ಕಚೇರಿಯು ಸ್ಪಷ್ಟನೆ ನೀಡಿದ್ದು ಯಾವುದೇ ರೀತಿಯ ನಿಂದನೀಯ ಪದಗಳನ್ನು ಬಳಸಲಾಗಿಲ್ಲ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!