ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಮಾಸ್-ಇಸ್ರೇಲ್, ಬಾಂಗ್ಲಾದೇಶ ಆಂತರಿಕ ಸಂಘರ್ಷ, ಪಾಕಿಸ್ತಾನದಲ್ಲೂ ಸರ್ಕಾರದ ವಿರುದ್ಧ ಹೋರಾಟ ನಡೆಯುತ್ತಿದೆ. ಈ ನಡುವೆ ಮತ್ತೊಂದು ಮುಸ್ಲಿಂ ದೇಶದಲ್ಲಿ ದಂಗೆಯ ಪರಿಸ್ಥಿತಿಗಳು ಗೋಚರಿಸುತ್ತಿವೆ.
ಟರ್ಕಿ ದೇಶದ ನಾಯಕನಾಗಿರುವ ಖಲೀಫ ಅಧ್ಯಕ್ಷರು ರೆಸೆಪ್ ತಯ್ಯಿಪ್ ಎರ್ಡೋಗನ್ ವಿರುದ್ಧ ಪ್ರತಿಭಟಿಸಲು ಸಾವಿರಾರು ಟರ್ಕಿಶ್ ನಾಗರಿಕರು ಬೀದಿಗಿಳಿದಿದ್ದಾರೆ.
ಸೆಕ್ಯುಲರ್ ರಿಪಬ್ಲಿಕನ್ ಪಕ್ಷದ ನಾಯಕ ಮತ್ತು ಇಸ್ತಾನ್‌ಬುಲ್‌ನ ಮೇಯರ್ ಎಕ್ರೆಮ್ ಇಮಾಮೊಗ್ಲು ಬಂಧನದ ನಂತರ ಸಾವಿರಾರು ಪ್ರತಿಭಟನಾಕಾರರು ಇಸ್ತಾನ್‌ಬುಲ್‌ನ ಬೀದಿಗಿಳಿದಿದ್ದಾರೆ. ಇಮಾಮೊಗ್ಲು ವಿರುದ್ಧ ಭ್ರಷ್ಟಾಚಾರ ಮತ್ತು ಭಯೋತ್ಪಾದಕ ಗುಂಪಿಗೆ ಸಹಾಯ ಮಾಡಲಾಗುತ್ತಿದೆ ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು.
ಟರ್ಕಿಯಲ್ಲಿ ಪ್ರತಿಭಟನೆಗಳ ಮೇಲೆ ನಾಲ್ಕು ದಿನಗಳ ನಿಷೇಧವಿದ್ದರೂ, ಇಸ್ತಾನ್‌ಬುಲ್‌ನ ಪೊಲೀಸ್ ಪ್ರಧಾನ ಕಚೇರಿ, ನಗರ ಸಭಾಂಗಣ ಮತ್ತು ಇಮಾಮೊಗ್ಲುರ ಪಕ್ಷದ ಕಚೇರಿಯ ಹೊರಗೆ ಸಾವಿರಾರು ಜನ ಜಮಾಯಿಸಿ ಇಮಾಮೊಗ್ಲು ಬಂಧನವನ್ನು ಕಾನೂನುಬಾಹಿರ ಮತ್ತು ಆಧಾರರಹಿತ ಎಂದು ಆರೋಪಿಸಿದ್ದಾರೆ.