ಹೊಸ ದಿಗಂತ ವರದಿ, ಕಲಬುರಗಿ:
ರಾಜ್ಯದ ಮುಖ್ಯಮಂತ್ರಿಗಳು ಡೈಲಾಗ್ ಹೊಡೆಯುವುದನ್ನು ಬಿಟ್ಟು, ಗೋಲಿ ಹೊಡೆಯುವುದಕ್ಕೆ ಶುರು ಮಾಡಬೇಕು.ಅಂದಾಗ ಮಾತ್ರ ಆಂತರಿಕ ಭಯೋತ್ಪಾದನೆ ಮಟ್ಟ ಹಾಕುವ ಕೆಲಸವಾಗುತ್ತದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಅವರು ನಗರದಲ್ಲಿ ಖಾಸಗಿ ಕಾಯ೯ಕ್ರಮವೊಂದರಲ್ಲಿ ಭಾಗಿಯಾಗುವ ನಿಮಿತ್ತ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಂದುಗಳ ಹತ್ಯೆಗೆ ಸಂಚು ರೂಪಿಸಿದವರ ಬಂಧನ ವಿಚಾರವಾಗಿ ಮಾತನಾಡಿದರು.ಉತ್ತರ ಪ್ರದೇಶದ ಮಾದರಿಯಲ್ಲಿ ನಮ್ಮಲ್ಲು ಸಕಾ೯ರ ನಡೆಸಬೇಕು ಎಂದು ಹೇಳಿದರು.
ಆಜಾನ್ ವಸ೯ಸ್ ಸುಪ್ರಭಾತ ವಿಚಾರವಾಗಿ ಮಾತನಾಡಿದ ಅವರು, ಸೂಪ್ರೀಕೋಟ್೯ ಆದೇಶವನ್ನು ಸವ೯ರೂ ಪಾಲನೆ ಮಾಡಬೇಕು. ಧ್ವನಿವಧ೯ಕಗಳು ಕಕ೯ಶ ಆಗದ ಹಾಗೇ ಬಳಕೆ ಮಾಡಬೇಕು.ಕಕ೯ಶ ಆಗದ ಹಾಗೇ ಅದನ್ನು ನೋಡಿಕೊಂಡು ಸಕಾ೯ರ ಕೂಡ ಸೂಪ್ರೀಂ ಆದೇಶವನ್ನು ಪಾಲಿಸಬೇಕು ಎಂದರು.
ಈ ವಿಷಯದಲ್ಲಿ ರಾಜ್ಯದ ಗೃಹ ಮಂತ್ರಿಗಳು ಕ್ರಮ ತೆಗೆದುಕೊಳ್ಳಬೇಕು. ಸಿಎಂ ಗೃಹ ಸಚಿವರಿಗೆ ಸೂಚನೆ ನೀಡಬೇಕು ಎಂದ ಅವರು, ಧ್ವನಿವಧ೯ಕಗಳ ಬಳಕೆ ಬಗ್ಗೆ ಉತ್ತರ ಪ್ರದೇಶದಲ್ಲಿ ಈಗಾಗಲೇ ಕ್ರಮ ಕೈಗೊಂಡಿದೆ. ಅದೇ ರೀತಿಯಲ್ಲಿ ಕನಾ೯ಟಕದಲ್ಲೂ ಸಹ ಕ್ರಮ ಕೈಗೊಳ್ಳಬೇಕು ಎಂದರು.
ಗೃಹ ಸಚಿವರು ಕೇವಲ ಹಿಂದೂ ದೇವಸ್ಥಾನ ದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಬಾರದು ಎಂದು ಹೇಳಿದರು.