ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ನಲ್ಲಿ ಇಂದಿನಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟ ಪ್ರಾರಂಭವಾಗಿದೆ.
ಇಂದು ಬೆಳಿಗ್ಗೆ 10-45ಕ್ಕೆ ಟರ್ಮಿನಲ್-2ಗೆ ಸೌದಿ ಅರೇಬಿಯಾದಿಂದ ಮೊದಲ ವಿದೇಶಿ ವಿಮಾನ ಆಗಮಿಸಿದೆ.
ಕೆಂಪೇಗೌಡ ಏರ್ ಪೋರ್ಟ್ ಎಂ.ಡಿ ಹರಿಮಾರನ್ ಅಂತರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಚಾಲನೆ ನೀಡಿದ್ದು, ಸೌದಿಯಿಂದ ಆಗಮಿಸಿ ಮೊದಲ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಯಕ್ಷಗಾನ, ಡೊಳ್ಳು ಕುಣಿತದ ಜೊತೆಗೆ ಕರ್ನಾಟಕದ ಸಾಂಸ್ಕೃತಿಕ ವೈಭವದೊಂದಿಗೆ ಹೂಗಳನ್ನು ನೀಡಿ ಅದ್ದೂರಿಯಾಗಿ ಸ್ವಾಗತಿಸಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟರ್ಮಿನಲ್ 2ನಲ್ಲಿ ವಿದೇಶಿ ವಿಮಾನಗಳು ಹಾರಾಟ ನಡೆಸಲಿವೆ.