Friday, September 22, 2023

Latest Posts

VIRAL VIDEO| ‘ಡೈರಿ ಮಿಲ್ಕ್ ಸಿಲ್ಕ್ ಪಕೋಡಾ’ ರೆಸಿಪಿ ಕಂಡು ನೆಟ್ಟಿಗರು ಸಿಡಿಮಿಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಸಂಜೆಯ ತಿಂಡಿಯಾಗಿ ಪಕೋಡ, ಬಜ್ಜಿ ಮಾಡೋದು ರೂಢಿ. ಬಜ್ಜಿಯಲ್ಲಿ ಮೆಣಸಿನಕಾಯಿ, ಆಲೂ, ಹೀರೇಕಾಯಿ, ಈರುಳ್ಳಿ ಬಜ್ಜಿ ಕೇಳಿದ್ದೇವೆ. ಆದರೆ, ಇತ್ತೀಚೆಗೆ ದೊರೆಯುವ ಬಜ್ಜಿಗಳು ಊಹೆಗೂ ನಿಲುಕದ್ದು. ಹೊಸದಾಗಿ ‘ಡೈರಿ ಮಿಲ್ಕ್ ಸಿಲ್ಕ್ ಪಕೋಡ’ ಬಗ್ಗೆ ಕೇಳಿದ್ದೀರಾ? ಇದೊಂದು ಹೊಸ ಪ್ರಯೋಗವೇನೋ ಎಂಬ ಅನುಮಾನ. ಈ ಕುರಿತು ಅಂತರ್ಜಾಲದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ಪ್ರಸಿದ್ಧ ಚಾಕೊಲೇಟ್ ಬಾರ್ ಈಗ ಪಕೋಡವಾಗಿ ಮಾರ್ಪಟ್ಟಿದೆ. ಅದು ಹೇಗೆ ಅಂದರೆ ಡೈರಿ ಮಿಲ್ಕ್ ಸಿಲ್ಕ್ ಚಾಕೊಲೇಟ್ ಬಾರ್ ಅನ್ನು ಕಡಲೆ ಹಿಟ್ಟಿನಲ್ಲಿ ತರಕಾರಿ ಬದಲಿಗೆ ಅದ್ದಿ ಬಿಸಿ ಎಣ್ಣೆಯಲ್ಲಿ ಹಾಕಲಾಗುತ್ತದೆ. ಪಕೋಡ ಕಂದು ಬಣ್ಣಕ್ಕೆ ತಿರುಗಿದಾಗ, ಅದನ್ನು ಹೊರತೆಗೆದು ಅರ್ಧದಷ್ಟು ಕತ್ತರಿಸಿ ಸರ್ವ್‌ ಮಾಡಿದ್ದಾರೆ. Instagram ನಲ್ಲಿ foodienovavlogs ಹಂಚಿಕೊಂಡ ವೀಡಿಯೊಗೆ ನೆಟ್ಟಿಗರು ಕೆಂಡಾಮಂಡಲರಾದರು.

ಡೈರಿ ಮಿಲ್ಕ್ ಮೇಲಿನ ನನ್ನ ಪ್ರೀತಿಯನ್ನು ಕೊಂದು ಹಾಕಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!