INTRESTING | ಇಂದು ಆಕಾಶದಲ್ಲಿ ನಡೆಯಲಿದೆ ಮ್ಯಾಜಿಕ್, ಗ್ರಹ ಮೆರವಣಿಗೆ ಮಿಸ್‌ ಮಾಡದೇ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವಾಗ್ಲೂ ರಾತ್ರಿ ಆಕಾಶ ನೋಡೋದು ಇಷ್ಟನಾ? ನಕ್ಷತ್ರಗಳು, ಚಂದ್ರ ಕೆಲವೊಮ್ಮೆ ಗ್ರಹಗಳು ಕೂಡ ಗೋಚರಿಸುತ್ತವೆ. ಇವತ್ತು ಕೂಡ ಒಂದು ಅದ್ಭುತ ಆಕಾಶದಲ್ಲಿ ಗೋಚರಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

ಅಮಾವಾಸ್ಯೆ ದಿನವಾದ ಇಂದು ರಾತ್ರಿ ಆಕಾಶದಲ್ಲಿ ‘ಗ್ರಹ ಮೆರವಣಿಗೆ’ ಎಂದು ಕರೆಯಲ್ಪಡುವ ಅಪರೂಪದ ಖಗೋಳ ವಿದ್ಯಮಾನವೊಂದು ನಡೆಯಲಿದ್ದು, ಒಂದೇ ಸಾಲಿನಲ್ಲಿ 7 ಗ್ರಹಗಳು ಗೋಚರವಾಗಲಿದೆ.

ಈ ವರ್ಷ ಜನವರಿಯಲ್ಲಿ ಶುಕ್ರ, ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳ ಗೋಚರತೆ ಆರಂಭವಾಯಿತು. ಫೆಬ್ರವರಿಯಲ್ಲಿ ಇವುಗಳ ಸಾಲಿಗೆ ಬುಧ ಗ್ರಹವೂ ಸೇರಿಕೊಂಡಿತು. ಇಂದು ಈ ಎಲ್ಲಾ 7 ಗ್ರಹಗಳು ಸೂರ್ಯನ ಒಂದು ಬದಿಯಲ್ಲಿ ಜೋಡಿಸಲ್ಪಡುತ್ತದೆ.

ಸೂರ್ಯಾಸ್ತದ ನಂತರ ಅಥವಾ ಸೂರ್ಯೋದಯಕ್ಕೆ ಮೊದಲು ವೀಕ್ಷಣೆಗೆ ಉತ್ತಮ ಸಮಯ ಎಂದು ಶಾಸ್ತ್ರಜ್ಞರು ಹೇಳಿದ್ದು, ಶುಕ್ರವಾರ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗಳನ್ನು ಬರಿಗಣ್ಣಿನಿಂದ ನೋಡಬಹುದು. ಆದರೆ ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಮಂಕಾಗಿರುವುದರಿಂದ ಬೈನಾಕ್ಯುಲರ್‌ ಅಗತ್ಯ.

2025ರ ಆಗಸ್ಟ್ ಮಧ್ಯಭಾಗದಲ್ಲಿ ಹಗಲಿನ ವೇಳೆ ಇದೇ ರೀತಿ ದೃಶ್ಯವನ್ನು ನೋಡಲು ಮತ್ತೊಂದು ಅವಕಾಶ ಸಿಗಲಿದೆ ಎಂದು ಖಗೋಳ ಶಾಸ್ತ್ರಜ್ಞರು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!