ನೀವು ಪಾನ್ ಇಷ್ಟಪಡುವವರೇ ಆಗಿದ್ದರೆ ಕಾಶಿಯಲ್ಲಿ ಹೂಡಿಕೆ ಮಾಡಿ: ಉದ್ಯಮಿಗಳಿಗೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್;
 
ವಿಶ್ವದ ಎಲ್ಲಾ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಾಶಿಯಲ್ಲಿ ಹೂಡಿಕೆ ಮಾಡುವಂತೆ ಕರೆ ನೀಡಿದ್ದಾರೆ. ನೀವು ನಿಜಕ್ಕೂ ಪಾನ್ ಇಷ್ಟಪಡುವವರೇ ಆಗಿದ್ದರೆ ನನ್ನ ಲೋಕಸಭಾ ಕ್ಷೇತ್ರವಾದ ಕಾಶಿಯಲ್ಲಿ ಹೂಡಿಕೆ ಮಾಡಿ. ಕಾಶಿಗೂ ಹಾಗೂ ವಿಳ್ಯದೆಲೆಯ ಪಾನ್​ಗೂ ಒಂದು ಬಿಡಿಸಲಾಗದ ಪರಂಪರೆ ಹಿಂದಿನಿಂದಲೂ ಇದೆ ಎಂದು ಹೇಳಿದ್ದಾರೆ.

ಸಿಂಗಾಪೂರ್​ನಲ್ಲಿ ಉದ್ಯಮಿ ನಾಯಕರ ಸಮಿತಿಯನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಾನ್ ಬಗ್ಗೆ ಎಲ್ಲಿಯೇ ಚರ್ಚೆಯಾಗಲಿ ಅದು ಬನಾರಸ್​ ಪಾನ್ ಉಲ್ಲೇಖವಿಲ್ಲದೆ ಅದು ಮುಗಿಯುವುದಿಲ್ಲ. ನಾನು ವಾರಾಣಿಸಿಯ ಸಂಸದ, ನೀವು ನಿಜಕ್ಕೂ ಪಾನ್​ ಪ್ರಿಯರೇ ಆಗಿದ್ದರೆ ನನ್ನ ಕ್ಷೇತ್ರವಾದ ವಾರಾಣಸಿಯಲ್ಲಿ ಹೂಡಿಕೆ ಮಾಡಿ ಎಂದು ಉದ್ಯಮಿಗಳಿಗೆ ಕರೆ ಕೊಟ್ಟಿದ್ದಾರೆ.

ಹಿಂದುಗಳ ಪವಿತ್ರ ನಗರಿಯಾದ ವಾರಾಣಸಿಯಲ್ಲಿ ಪಾನ್ ತನ್ನದೇ ಆದ ವಿಶೇಷ ಗುರುತನ್ನು ಪರಂಪರಾನುಗಾತವಾಗಿ ಉಳಿಸಿಕೊಂಡು ಬಂದಿದೆ. ಅಲ್ಲಿ ನಡೆಯುವ ಪ್ರತಿ ಮದುವೆಯೂ ಬನಾರಸ್ ಪಾನ್ ಇಲ್ಲದೇ ಸಂಪೂರ್ಣಗೊಳ್ಳುವುದಿಲ್ಲ. ಹೀಗಾಗಿ ನೀವು ಪಾನ್ ಇಷ್ಟಪಡುವವರಾಗಿದ್ದರೆ., ಬನಾರಸ್​ ನಿಮಗೆ ಹೂಡಿಕೆಗೆ ತಕ್ಕ ಸ್ಥಳ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!