ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣ ಏನೆಂದು ತನಿಖೆ ಮಾಡಿ: ಪೊಲೀಸ್ ಠಾಣೆಗೆ ದೂರು ನೀಡಿದ ಪತ್ನಿ ಸುಮಿತ್ರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿರ್ದೇಶಕ ಗುರುಪ್ರಸಾದ್ ಅವರ ಸಾವಿನ ಬೆನ್ನಲ್ಲಿಯೇ ಅವರ ಪತ್ನಿ ಸುಮಿತ್ರಾ ಗುರುಪ್ರಸಾದ್ ಅವರು ಮಾದನಾಯಕನಹಳ್ಳಿ ಪೊಲೋಸ್ ಠಾಣೆಯಲ್ಲಿ ದೂರು ದಾಖಲಿಸಿ, ತನ್ನ ಗಂಡನ ಸಾವಿಗೆ ಕಾರಣವೇನೆಂದು ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆಲಮಂಗಲ ತಾಲೂಕಿಮ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಮದುವೆಯಾದ ಹಿನ್ನೆಲೆ, ತಮ್ಮ ಕೊನೆಯ ಭೇಟಿ ಮತ್ತು ಸಂಪರ್ಕ ಮಾಡಿದ್ದ ವಿವರನ್ನೂ ದಾಖಲಿಸಿದ್ದಾರೆ. ನನ್ನ ಯಜಮಾನರಿಗೆ ಸಾಲ ಮಾಡಿಕೊಳ್ಳಬೇಡಿ ಎಂದು ಹೇಳಿದ್ದೆ. ಆದರೂ ಸಾಲ ಮಾಡಿಕೊಂಡಿದ್ದಾರೆ. ಮುಂದುವರೆದು ನನ್ನ ಗಂಡನ ಆತ್ಮಹತ್ಯೆಗೆ ಶರಣಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಸಾವಿಗೆ ಕಾರಣ ಏನೆಂದು ತನಿಖೆ ಮಾಡಬೇಕು ಎಂದು ದೂರಿನಲ್ಲು ಉಲ್ಲೇಖ ಮಾಡಿದ್ದಾರೆ.

ದೂರಿನ ಪ್ರತಿಯಲ್ಲೇನಿದೆ?
ನಾನು ಕಳೆದ 4 ವರ್ಷದ ಹಿಂದೆ 2020 ರಲ್ಲಿ ನಿರ್ದೇಶಕ ಗುರುಪ್ರಸಾದ್ ಅವರನ್ನು ಮದುವೆಯಾಗಿದ್ದೆ. ನನಗೆ ಒಂದು ಹೆಣ್ಣು ಮಗುವಿದೆ. ಈ ಹಿಂದೆ ಗುರುಪ್ರಸಾದ್ ಅವರಿಗೆ ಆರತಿ ಎಂಬುವವರ ಜೊತೆಗೆ ಮದುವೆಯಾಗಿತ್ತು. ಸದರಿ ಅವರೊಂದಿಗಿನ ಮದುವೆ ವಿಚ್ಚೆಧನವಾಗಿರುತ್ತದೆ. ಅವರು ಚಲನಚಿತ್ರ ನಿರ್ದೇಶಕರಗಿದ್ದರಿಂದ ನಾನು ಮದುವೆಯಾದೆ. ನಾಲ್ಕು ವರ್ಷ ಜೊತೆಗೆ ಇದ್ದೆವು. ಸಣ್ಣ ಪುಟ್ಟ ವಿಚಾರಗಳಿಂದ ಜಗಳ ಆಗಿ 6 ತಿಂಗಳಿಂದ ದೂರವಾಗಿದ್ದೆವು. ನನಗೆ ಆರೋಗ್ಯ ಸರಿ ಇರಲಿಲ್ಲ. ಅ ಕಾರಣದಿಂದಾಗಿ ನಮ್ಮ ಯಜಮಾನರು (ಗುರುಪ್ರಸಾದ್) ನನ್ನ ತಾಯಿಯ ಮನೆಯಲ್ಲಿ ಇರಲು ಹೇಳಿದ್ದರು.

ನಾವು ಕಳೆದ 6 ತಿಂಗಳ ಹಿಂದೆ ಹುಸ್ಕೂರನ ನ್ಯೂ ಅವೆನ್ ಅಪಾರ್ಟ್ಮೆಂಟ್ ಗೆ ಬಂದಿದ್ದೆವು. ಟವರ್ ನಂ 27ರ ನಲ್ಲಿರುವ ಮನೆ ನಂ 11 ಮೊದಲನೇ ಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದೆವು. ನನಗೆ ಹುಷಾರಿಲ್ಲದ ಕಾರಣ ಯಜಮಾನರು ನನ್ನನ್ನ ತಾಯಿಯ ಮನೆಯಲ್ಲಿ ಇರಲು ಹೇಳಿ ಕಳಿಸಿಕೊಟ್ಟಿದ್ದರು. ನಾವು ಲೋಕಸಭಾ ಚುನಾವಣೆಯಲ್ಲಿ ಕೊನೆಯ ಬಾರಿ ಸಿಕ್ಕಿದ್ದೆವು. ನಮ್ಮ ಯಜಮಾನರನ್ನ ಚಲನಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದರಿಂದ ದೂರವಾಣಿ ಮೂಲಕ ಸಂಪರ್ಕದಲಿದ್ದೆವು. ದಿನಾಂಕ 25-10-2024 ರಂದು ನನ್ನ ಯಜಮಾನರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದ್ದು ಅವರು ಕರೆಯನ್ನು ಸ್ವೀಕರಿಸಲಿಲ್ಲ. ಅವರು ಕರೆಯನ್ನು ಸ್ವೀಕರಿಸದಿದ್ದಾಗ ಬ್ಯುಸಿ ಇದ್ದಾರೆ ಎಂದು ಸುಮ್ನೆ ಅದೆ.

ಇದಾದ ನಂತರ ಇಂದು ದಿನಾಂಕ 3-11-2024 ರಂದು ಬೆಳಗ್ಗೆ ಒಂದು ಗಂಟೆಗೆ ಅಪಾರ್ಟ್ಮೆಂಟ್ ನಿವಾಸಿ ಜಯರಾಮ್ ಕರೆ ಮಾಡಿ ತಿಳಿಸಿದರು. ನಿಮ್ಮ ಮನೆಯ ಬಾಗಿಲ ಬಳಿ ದುರ್ವಾಸನೆ ಬರುತ್ತಾ ಇದೆ, ಮನೆಯ ಬಾಗಿಲ ಬಳಿ ಬಾಗಿಲು ತಟ್ಟಿದ್ದರು ಬಾಗಿಲು ತೆಗೆಯುತ್ತಿಲ್ಲ. ನಾನು ಗಾಬರಿಯಿಂದ ನಮ್ಮ ಕುಟುಂಬದವರಯ ಬಂದು ನೋಡಿದಾಗ ಮನೆಯ ಬಾಗಿಲು ಹಾಕಿತ್ತು. ಕಿಟಕಿಯಲ್ಲಿ ಬಗ್ಗಿ ನೋಡಿದರೆ ನಮ್ಮ ಯಜಮಾನರು ಆತ್ಮಹತ್ಯೆಗೆ ಶರಣಾಗಿದ್ದರು. ಪಕ್ಕ ಮನೆಯವರ ಸಹಾಯದಿಂದ ಹಾಗೂ ಪೋಲೀಸರ ನೆರವಿನೊಂದಿಗೆ ಬಾಗಿಲನ್ನು ಹೊಡೆದು ಒಳಗೆ ನೋಡಿದ್ದೇವೆ.

ನನ್ನ ಗಂಡ ಗುರುಪ್ರಸಾದ್ ನೇಣಿಗೆ ಶರಣಾಗಿದ್ದರು. ಸಿನಿಮಾ ವಿಚಾರದಲ್ಲಿ ಸಾಲ ಮಾಡಿಕೊಂಡಿದ್ದರು. ಈ ವಿಚಾರ ತಿಳಿಸಿದ್ದು ನಾನು ನಮ್ಮ ಯಜಮಾನರಿಗೆ ಸಾಲವನ್ನು ತೀರಿಸೋಣ ಎಂದು ಧೈರ್ಯ ಹೇಳುತ್ತಿದ್ದೆ. ಆದರೂ ನನ್ನ ಮಾತನ್ನು ಲೆಕ್ಕಿಸದೆ ನನ್ನ ಗಂಡ ಸಾಲದ ಬಾದೆಯಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು 3-4 ದಿನಗಳ ಹಿಂದೆ ಯಾವುದೋ ಸಮಯದಲ್ಲಿ ಮನೆಯ ಬಾಗಿಲನ್ನು ಒಳಗಡೆಯಿಂದ ಲಾಕ್ ಮಾಡಿಕೊಂಡು ನೂಲಿನ ಹಗ್ಗದಿಂದ ನೇಣಿಗೆ ಶರಣಾಗಿದ್ದಾರೆ. ಮಹಡಿಯ ಕಬ್ಬಿಣದ ಕೊಕ್ಕೆಗೆ ಕಟ್ಟಿಕೊಂಡು ಕುಣಿಕೆ ಮಾಡಿ ಕತ್ತನ್ನು ಜೀರಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ. ನನ್ನ ಗಂಡನ ಸಾವಿನಲ್ಲಿ ಅನುಮಾನ ಇಲ್ಲ. ತಾವು ಸ್ಥಳಕ್ಕೆ ಬಂದು ಮುಂದಿನ ಕಾನೂನು ಕ್ರಮ ಕೈಗೊಳ್ಳಿ. ನೇಣು ಹಾಕೊಂಡಿರುವ ಬಗ್ಗೆ ನಿಖರವಾದ ಕಾರಣ ತನಿಖೆ ಮಾಡಬೇಕೆಂದು ದೂರು ನೀಡುತ್ತಿದ್ದೇನೆ ಎಂದು ಸುಮಿತ್ರಾ ಅವರು ಉಲ್ಲೇಖ ಮಾಡಿದ್ದಾರೆ.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!