ಅಯೋಧ್ಯೆಯ ವಾದ್ಯ ಮೇಳದಲ್ಲಿ ಕನ್ನಡತಿಗೆ ಆಹ್ವಾನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆಯಲ್ಲಿ ರಾಮಲಲಾ ಪ್ರತಿಷ್ಠಾಪನೆಗೆ ಈಗಾಗಲೆ ಹಲಾವಾರು ಗಣ್ಯರನ್ನು ಆಹ್ವಾನಿಸಲಾಗಿದೆ. ಇದೇ ವೇಳೆ ರಾಮಜನ್ಮ ಭೂಮಿಯಲ್ಲಿ ನಡೆಯುವ ವಾದ್ಯ ಮೇಳಕ್ಕೆ ಕನ್ನಡತಿ ಶುಭಾ ಸಂತೋಷ ಅವರನ್ನೂ ಆಹ್ವಾನಿಸಲಾಗಿದೆ.

ರಾಮಮಂದಿರದ ಉದ್ಘಾಟನೆಯ ದಿನದಂದು ಸಮರ್ಪಣಾ ಮನೋಭಾವದಿಂದ ಸಾಮೂಹಿಕವಾಗಿ ಆಚರಿಸಲಾಗುತ್ತದೆ. ಈ ಮೇಳದಲ್ಲಿ ಭಾಗವಹಿಸಲು ಕನ್ನಡತಿ ಶುಭಾ ಸಂತೋಷ ಅವರನ್ನು ವೀಣೆಯನ್ನು‌ ನುಡಿಸಲು ಆಯ್ಕೆಯಾಗಿದ್ದಾರೆ. ಆಹ್ವಾನ ಸಿಕ್ಕ ವಿಷಯ ಕೇಳಿ ಶುಭಾ ಅವರು ಸಂತೋಷಪಟ್ಟಿದ್ದಾರೆ.

ಸುಮಾರು 22 ರಾಜ್ಯಗಳ ಶಾಸ್ತ್ರೀಯ ಮತ್ತು ಹಿಂದೂಸ್ತಾನಿ ಸಂಗೀತ ವಾದ್ಯಗಳನ್ನು ಅಯೋಧ್ಯೆಯಲ್ಲಿ ನುಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶುಭಾ ಅವರಿಗೂ ಆಹ್ವಾನ ಬಂದಿದೆ.

ಶುಭ ವೀಣಾ 250ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಈಗ ರಾಮಮಂದಿರದಲ್ಲಿ ಕನ್ನಡತಿ ವೀಣೆ ನುಡಿಸುವ ಅವಕಾಶ ಸಿಕ್ಕಿದೆ. ‘ಜಯತು ಕೊಂಡದ ರಾಮ ಜಯತು ದಶರಥ ರಾಮ’ ಗೀತೆಯನ್ನು ಶುಭಾ ಸಂತೋಷ ಹಾಡಲಿದ್ದಾರೆ ಎನ್ನಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!