Thursday, August 11, 2022

Latest Posts

ಐಪಿಎಲ್‌ 2022: ಹರಾಜಾದ ಟಾಪ್‌ 10 ಆಟಗಾರರು, ಪಡೆದ ಹಣ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡಿಯನ್‌ ಪ್ರೀಪಿಯರ್‌ ಲೀಗ್‌ ನ ಸೀಸನ್‌ 15ರ ಮೆಗಾ ಹರಾಜಿನ ಮೊದಲ ಸುತ್ತು ಮುಗಿದಿದ್ದು, ಈವರೆಗೆ 10 ಆಟಗಾರರು ಹರಾಜಾಗಿದ್ದಾರೆ. ಅತಿ ಹೆಚ್ಚು ಮೊತ್ತ ಪಡೆದು ಶ್ರೇಯಸ್‌ ಅಯ್ಯರ್‌ ಕೊಲ್ಕತ್ತಾ ನೈಟ್‌ ರೈಡರ್ಸ್‌ ಗೆ ಸೇರ್ಪಡೆಯಾಗಿದ್ದಾರೆ.
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು 7 ಕೋಟಿ ರೂ. ಗೆ ಫಾಫ್‌ ಡುಪ್ಲೆಸಿಸ್‌ ರನ್ನು ಪಡೆದರೆ, ಗುಜರಾತ್‌ ಟೈಟನ್ಸ್‌ ಮೊಹಮ್ಮದ್‌ ಶಮಿಯನ್ನು 6.25 ಕೋಟಿ ರೂ. ಗೆ ಖರೀದಿಸಿದೆ.
ಶ್ರೇಯಸ್‌ ಅಯ್ಯರ್‌ ರನ್ನು ಅತಿ ಹೆಚ್ಚು ಅಂದರೆ 12.25ಕೋಟಿ ರೂ.ಗೆ ಕೊಲ್ಕತ್ತಾ ನೈಟ್‌ ರೈಡರ್ಸ್‌ ಪಡೆದಿದೆ. ಟ್ರೆಂಟ್‌ ಬೌಲ್ಟ್‌ ರನ್ನು ರಾಜಸ್ಥಾನ್‌ ರಾಯಲ್ಸ್‌ 8 ಕೋಟಿ ರೂ. ಗೆ ಪಡೆದದುಕೊಂಡಿದೆ.
9.25 ಕೋಟಿ ರೂ. ಗೆ ಕಗಿಸೊ ರಬಾಡ ರನ್ನು ಪಂಜಾಬ್‌ ಕಿಂಗ್ಸ್‌ ಖರೀದಿಸಿದೆ. ಪಾಟ್‌ ಕುಮಿನ್ಸ್‌ ಗೆ ಕೆಕೆಆರ್‌ ತಂಡ 7.25 ಕೋಟಿ ರೂ. ನೀಡಲಿದೆ.
ಇನ್ನು ರವಿಚಂದ್ರನ್‌ ಅಶ್ವಿನ್‌ 5 ಕೋಟಿ ರೂ.ಗೆ ರಾಜಸ್ಥಾನ್‌ ರಾಯಲ್ಸ್‌ ಗೆ ಸೇರಿದ್ದಾರೆ. ಪಂಜಾಬ್‌ ಕಿಂಗ್ಸ್‌ 8.25 ಕೋಟಿ ರೂ. ಬಿಡ್‌ ಮಾಡುವ ಮೂಲಕ ಶಿಖರ್‌ ಧವನ್‌ ರನ್ನು ತಮ್ಮ ತಂಡಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
ಕ್ವಿಂಟನ್ ಡೊಕಾಕ್‌ ರನ್ನು 6.75 ಕೋಟಿ ರೂ. ಮೂಲಕ ‌ ಲಕ್ನೋ ಸೂಪರ್‌ ಜೈಂಟ್ಸ್‌ ಗೆ ಸೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ 6.25 ಕೋಟಿ ರೂ. ಕೊಡುವ ಮೂಲಕ ಡೇವಿಡ್‌ ವಾರ್ನರ್‌ ಗೆ ಬಿಡ್‌ ಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss