Sunday, June 26, 2022

Latest Posts

ಡೆಲ್ಲಿ ಕ್ಯಾಪಿಟಲ್ಸ್ ‌ಓಪನರ್ ಪೃಥ್ವಿ ಶಾಗೆ ಟೈಫಾಯಿಡ್‌; ಮುಂದಿನ ಪಂದ್ಯಗಳಿಗೆ ಅಲಭ್ಯ

ಹಸೊದಿಗಂತ ಡಿಜಿಟಲ್‌ ಡೆಸ್ಕ್‌
ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಕಳೆದ ಎರಡು ವಾರಗಳಿಂದ ಜ್ವರದಿಂದ ಬಳಲುತ್ತಿದ್ದು ತಂಡದ ಕೊನೆಯ ಎರಡು ಲೀಗ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ತಂಡದ ಸಹಾಯಕ ಕೋಚ್ ಶೇನ್ ವ್ಯಾಟ್ಸನ್ ಗುರುವಾರ ಹೇಳಿದ್ದಾರೆ.
ಶಾ ಅವರು ತಂಡದ ಕೊನೆಯ ಮೂರು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಯಗಳಿಸಿದ ಪೃಥ್ವಿ ಆಸ್ಪತ್ರೆಗೆ ದಾಖಲಾಗಿದ್ದರು, ಅವರು ಟೈಫಾಯಿಡ್‌ನಿಂದ ಬಳಲುತ್ತಿದ್ದಾರೆ ಎಂದು ಡಿಸಿ ನಾಯಕ ರಿಷಬ್ ಪಂತ್ ಹೇಳಿದ್ದಾರೆ. ಮೇ 1ರಂದು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆಡಿದ್ದಶಾ ಜ್ವರದಿಂದ ಬಳಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಡಿಸಿ ಆಡಿದ್ದ ಎರಡೂ ಪಂದ್ಯಗಳಿಗೆ ಅಲಭ್ಯರಾಗಿದ್ದರು.
ಮುಂದಿನ ಪಂದ್ಯಗಳಿಂದ ಪೃಥ್ವಿ ಹೊರಗುಳಿಯುತ್ತಿರುವುದು ತಂಡಕ್ಕೆ ದೊಡ್ಡ ಹೊಡೆತ ನೀಡಿಲಿದೆ.
ಅವರೊಬ್ಬ ಅದ್ಭುತ ಕೌಶಲ್ಯಪೂರ್ಣ ಯುವ ಬ್ಯಾಟರ್ ಆಗಿದ್ದಾರೆ. ವಿಶ್ವದ ಅತ್ಯುತ್ತಮ ಬೌಲರ್‌ಗಳನ್ನು ನಿರ್ಧಯವಾಗಿ ದಂಡಿಸಬಲ್ಲರು. ಅವರು ಶೀಘ್ರವಾಗಿ ಮೈದಾನಕ್ಕೆ ಹಿಂತಿರುಗುವ ಭರವಸೆಯಿದೆ ಎಂದು ವ್ಯಾಟ್ಸನ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss