IPL 2023 ಹರಾಜು | ಸ್ಟಾರ್ ಆಲ್‌ರೌಂಡರ್‌ ಮೇಲೆ ಸಿಎಸ್‌ಕೆ ಕಣ್ಣು: ಆತನಿಗಾಗಿ ಕೋಟಿ ಕೋಟಿ ನೀಡಲು ತಯಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಚೆನ್ನೈ ಸೂಪರ್ ಕಿಂಗ್ಸ್ (CSK) ಮುಂಬರುವ ಶುಕ್ರವಾರ (ಡಿಸೆಂಬರ್ 23) ಕೊಚ್ಚಿಯಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ಮಿನಿ-ಹರಾಜಿನಲ್ಲಿ ಸ್ಟಾರ್‌ ಆಲ್ರೌಂಡರ್‌ ಒಬ್ಬನಿಗೆ ದೊಡ್ಡ ಮೊತ್ತದ ಹಣ ಖರ್ಚು ಮಾಡುವ ಸುಳಿವು ಬಿಟ್ಟುಕೊಟ್ಟಿದೆ. CSK ಹರಾಜು ವಿಂಡೋದಲ್ಲಿ ಈ  ಆಲ್‌ರೌಂಡರ್‌ ಶತಾಯ ಗತಾಯ ಕೊಂಡುಕೊಳ್ಳಲೇ ಬೇಕು ಎಂದು ನಿರ್ಧರಿಸಿದೆ. ಆತನನ್ನು ಕೊಳ್ಳಲು ಧೋನಿ ಸಹ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎಂದು ವರದಿಯಾಗಿದೆ. ಈ ಮೂಲಕ ಪ್ರಾಂಚೈಸಿ ಇತ್ತೀಚೆಗಷ್ಟೇ ನಿವೃತ್ತರಾದ ಡ್ವೇನ್ ಬ್ರಾವೋ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಕರೆತರಲಿದೆ.
CSK ಕ್ಯಾಂಪ್ ನಿಕಟ ಮೂಲಗಳ ಪ್ರಕಾರ, ಇಂಗ್ಲಿಷ್ ಆಲ್‌ರೌಂಡರ್ ಸ್ಯಾಮ್ ಕುರ್ರಾನ್ ಸೇವೆಗಾಗಿ ಫ್ರಾಂಚೈಸ್ ದೊಡ್ಡ ಮೊತ್ತವನ್ನು ಇರಿಸಿಕೊಂಡು ಕಾಯಲಿದೆ. ಇತ್ತೀಚೆಗೆ ನಡೆದ T20 ವಿಶ್ವಕಪ್‌ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿರುವ ಸ್ಯಾಮ್ ಕರನ್ ರಾಷ್ಟ್ರೀಯ ತಂಡಕ್ಕೆ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರ ಪ್ರತಿಭೆ ಮತ್ತು ಮೌಲ್ಯವನ್ನು ಪರಿಗಣಿಸಿ ಹರಾಜಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ಒಬ್ಬರಾಗಬಹುದು ಎಂದು ಪ್ರಾಂಚೈಸಿ ಮೂಲಗಳು ತಿಳಿಸಿವೆ.
24 ವರ್ಷ ವಯಸ್ಸಿನ ಕರನ್ T20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ‌ ಪ್ರಚಂಡ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಕೌಟ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಸೋಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು. ಕುರಾನ್‌ ವಿಶ್ವಕಪ್‌ ನಲ್ಲಿ ಕೇವಲ 7 ಪಂದ್ಯಗಳಲ್ಲಿ 13 ವಿಕೆಟ್‌ ಕಬಳಿಸಿದರು. ವಿಕೆಟ್‌ ಪಟ್ಟಿಯಲ್ಲಿ ಶ್ರೀಲಂಕಾದ ವನಿಂದು ಹಸರಂಗ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ಅವರು 11.38 ರ ಸರಾಸರಿಯಲ್ಲಿ ವಿಕೆಟ್‌ಗಳನ್ನು ಪಡೆದರು. ಇದು ಇಂಗ್ಲೆಂಡ್‌ನ ಎಲ್ಲಾ ವೇಗದ ಬೌಲರ್‌ಗಳಲ್ಲಿ ಅತ್ಯುತ್ತಮವಾಗಿದೆ.
ಪವರ್‌ಪ್ಲೇ ಹಾಗೂ ಡೆತ್‌ ಓವರ್ ನಲ್ಲಿ ಅತ್ಯುತ್ತಮ ಬೌಲಿಂಗ್‌ ದಾಳಿ ಸಂಘಟಿಸುವ ಸಾಮಥ್ಯ ಹೊಂದಿರುವ ಕರನ್ ಐಪಿಎಲ್‌ ನಲ್ಲಿ 32 ಪಂದ್ಯಗಳನ್ನು ಆಡಿ 22.47 ಸರಾಸರಿಯೊಂದಿಗೆ 337 ರನ್ ಗಳಿಸಿದ್ದಾರೆ. ಜೊತೆಗೆ 32 ವಿಕೆಟ್‌ಗಳನ್ನು ಹೊಂದಿದ್ದಾರೆ. 11/4 ರ ಅತ್ಯುತ್ತಮ ರೆಕಾರ್ಡ್‌ ಸಹ ಹೊಂದಿದ್ದಾರೆ.
ಕುರ್ರಾನ್ ಈ ಹಿಂದೆ ಐಪಿಎಲ್‌ನಲ್ಲಿ ಸಿಎಸ್‌ಕೆ ಮತ್ತು ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಅನ್ನು ಪ್ರತಿನಿಧಿಸಿದ್ದಾರೆ. ಡ್ವೇನ್ ಬ್ರಾವೋ ಇನ್ನು ಮುಂದೆ CSK ತಂಡದ ಭಾಗವಾಗಿಲ್ಲದಿರುವುದರಿಂದ (ಬೌಲಿಂಗ್ ಕೋಚ್‌ ಆಗಿ ಮುಂದುವರೆಯಲಿದ್ದಾರೆ) ಪ್ರಾಂಚೈಸಿ ಬ್ರಾವೋಗೆ ದೀರ್ಘಾವಧಿಯ ಬದಲಿಯಾಗಿ ಕರನ್‌ ರನ್ನು ಕೊಳ್ಳುವ ಸಿದ್ಧತೆಯಲ್ಲಿದೆ. ಜೊತೆಗೆ ಕರನ್‌ ಈ ಹಿಂದೆ ಸಿಎಸ್‌ ಕೆ ಪ್ರಾಂಚೈಸಿ ಜೊತೆಗೆ ಆಡಿದ್ದು ಪ್ರಾಂಚೈಸಿ ಅವರ ಸಾಮರ್ಥ್ಯವನ್ನು ಅರಿತಿದೆ. ಕರ್ರನ್ ಮೂಲ ಬೆಲೆ 2 ಕೋಟಿ ಆಗಿದೆ. ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್‌, ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡಗಳು ಕರನ್‌ ರಂತಹ ಆಲ್ರೌಂಡರ್‌ ನನ್ನು ಹುಡುಕುತ್ತಿದ್ದು, ಹರಾಜಿನಲಲಿ ಭಾರಿ ಪೈಪೋಟಿ ಏರ್ಪಡುವ ಲಕ್ಷಣಗಳಿವೆ. ಕರನ್‌ ಅಂದಾಜು 11 ರಿಂದ 13 ಕೋಟಿ ವರೆಗೆ ಬಿಕರಿಯಾಗುವ ಸಾಧ್ಯತೆ ಇದೆ. ಹೀಗಾದಲ್ಲಿ ಸಿಎಸ್‌ ಕೆ ಪರ್ಸ್‌ ನ (20 ಕೋಟಿ) ಬಹುಪಾಲು ಹಣವನ್ನು ಕರನ್‌ ಒಬ್ಬರೆ ಹೀರಲಿದ್ದಾರೆ. ಐಪಿಎಲ್ ಹರಾಜು ಡಿಸೆಂಬರ್ 23 ಶುಕ್ರವಾರ ಕೊಚ್ಚಿಯಲ್ಲಿ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!