IPL 2023 retention | ಆರ್‌ಸಿಬಿ ಬಳಿ ಹೆಚ್ಚು ಹಣವಿಲ್ಲ, ಆದರೆ ಅತ್ಯುತ್ತಮ ತಂಡ ಕಟ್ಟಿದೆ: ಆಕಾಶ್ ಚೋಪ್ರಾ ಮೆಚ್ಚುಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ಆವೃತ್ತಿಯ ಐಪಿಎಲ್‌ ನಲ್ಲಿ 3 ನೇ ಸ್ಥಾನ ಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಈ ಬಾರಿ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಪ್ರಾಂಚೈಸಿ ತನ್ನ ಕೋರ್‌ ಟೀಮ್‌ ಅನ್ನು ತನ್ನಲ್ಲೇ ಉಳಿಸಿಕೊಂಡಿದ್ದು ಕೇವಲ 5 ಆಟಗಾರರನ್ನಷ್ಟೇ ಕೈಬಿಟ್ಟಿದೆ. ಆರ್ಸಿಬಿ ಮ್ಯಾನೇಜ್‌ ಮೆಂಟ್‌ ನ ಈ ನಿರ್ಧಾರವನ್ನು ಆಕಾಶ್‌ ಚೋಪ್ರಾ ಶ್ಲಾಘಿಸಿದ್ದಾರೆ. ʼಆರ್ಸಿಬಿ ದೊಡ್ಡ ಪರ್ಸ್ ಅನ್ನು ಹೊಂದಿಲ್ಲದಿರಬಹುದು, ಆದರೆ ಅತ್ಯತ್ತಮ ತಂಡ ಕಟ್ಟಿದೆ ಎಂದು ಆಕಾಶ್ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪ್ರಾಂಚೈಸಿ ತನ್ನ ಎಡಗೈ ವೇಗಿ ಜೇಸನ್ ಬೆಹ್ರೆಂಡಾಫ್ ಅವರನ್ನು ಮುಂಬೈ ಇಂಡಿಯನ್ಸ್‌ಗೆ ಟ್ರೇಡ್‌ ಮಾಡಿದೆ. ಜೊತೆಗೆ ಹಿಂದಿನ ತಂಡದಿಂದ ಶೆರ್ಫೇನ್ ರುದರ್‌ಫೋರ್ಡ್, ಚಾಮಾ ಮಿಲಿಂದ್, ಲುವ್ನಿತ್ ಸಿಸೋಡಿಯಾ ಮತ್ತು ಅನೀಶ್ವರ್ ಗೌತಮ್ ಅವರನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿರುವ ಕಿರು ಹರಾಜಿಗೆ ತಂಡದ ಪರ್ಸ್‌ ನಲ್ಲಿ ₹8.75 ಕೋಟಿ ಮಾತ್ರ ಇದೆ.
ಈ ಬಗ್ಗೆ ಪ್ರತಿಕ್ರಿಸಿಸಿರುವ ಚೋಪ್ರಾ, ಅವರು ಯಾವುದೇ ಪ್ರಮುಖ ಆಟಗಾರರನ್ನು ಬಿಡಲಿಲ್ಲ, ಆದ್ದರಿಂದ ಹೆಚ್ಚು ಹಣ ಲಭ್ಯವಾಗಲಿಲ್ಲ. ಅವರಿಗೆ ಅಗತ್ಯವೂ ಇಲ್ಲ. ಆರ್ಸಿಬಿ ಈಗಾಗಲೇ ತನ್ನ ತಂಡವನ್ನು ಫೈನಲ್‌ ಮಾಡಿಕೊಂಡಿದೆ. ಅವರಿಗೊಬ್ಬ ಹೆಚ್ಚುವರಿಯಾಗಿ ವೇಗದ ಬೌಲರ್ ಬೇಕು ಏಕೆಂದರೆ ಅವರು ಚಿನ್ನಸ್ವಾಮಿಯಲ್ಲಿ ಸಾಕಷ್ಟು ಆಡಲಿದ್ದಾರೆ. ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ  ಮತ್ತು ಸಣ್ಣ ಬೌಂಡರಿಗಳಿಗೆ ಹೆಸರುವಾಸಿಯಾಗಿದೆ. ಸ್ಪಿನ್ನರ್‌ಗಳಿಗೆ ಹೋಲಿಸಿದರೆ ಸೀಮರ್‌ಗಳು ಸಾಮಾನ್ಯವಾಗಿ ಇಲ್ಲಿ ಹೆಚ್ಚಿನ ಯಶಸ್ಸನ್ನು ಅನುಭವಿಸಿದ್ದಾರೆ. ಫಾಫ್ ಡು ಪ್ಲೆಸಿಸ್ ತಂಡವು ಬ್ಯಾಟಿಂಗ್ ವಿಭಾಗದಲ್ಲಿ ಸಮತೋಲಿತವಾಗಿದೆ ಎಂದು ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
“ಟಾಪ್ ಆರ್ಡರ್‌ ನಲ್ಲಿ ಅವರಿಗೆ ಫಿನ್ ಅಲೆನ್ ಹಾಗೂ ಫಾಫ್ ಡು ಪ್ಲೆಸಿಸ್ ರೂಪದಲ್ಲಿ ಆಯ್ಕೆಗಳಿವೆ. ಕೊಹ್ಲಿ, ಪಟಿದಾರ್‌ ಇರುವ ಮಧ್ಯಮ ಕ್ರಮಾಂಕವೂ ಬಲಿಷ್ಠವಾಗಿದೆ. ಕೆಳ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಕೆಲಸವನ್ನು ಮಾಡುತ್ತಾರೆ. ಸ್ಪಲ್ಪ ಮಟ್ಟಿಗೆ ಧೋಷವಿರುವುದು ಅವರ  ಸೀಮ್-ಬೌಲಿಂಗ್ ವಿಭಾಗದಲ್ಲಿ. ಅದನ್ನು ಬಲಪಡಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
“ಅವರ ಬಳಿ ಹೆಚ್ಚು ಹಣವಿಲ್ಲ, ಆದ್ದರಿಂದ ಹೆಚ್ಚು ಶಾಪಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಅವರು ತಮ್ಮ ವೇಗದ ಬೌಲಿಂಗ್ ಅನ್ನು ಇನ್ನಷ್ಟು ಬಲಪಡಿಸಬೇಕು ಎಂದು ನಾನು ಭಾವಿಸುತ್ತೇನೆ. ಜೊತೆಗೆ 2023 ರಲ್ಲಿ ಆಶಸ್ ಮತ್ತು ಏಕದಿನ ವಿಶ್ವ ಕಪ್‌ ವರ್ಷ ವಾದ್ದರಿಂದ ಆಸ್ಟ್ರೇಲಿಯಾದ ವೇಗಿಗಳ ಪೂರ್ಣ ಲಭ್ಯತೆ ಬಗ್ಗೆ ಖಚಿತವಿಲ್ಲ. ಫ್ರಾಂಚೈಸ್ ಜೋಶ್ ಹ್ಯಾಜಲ್‌ವುಡ್‌ಗೆ ಬದಲಿ ಆಟಗಾರನನ್ನು ಸಿದ್ಧವಾಗಿಸಿಕೊಳ್ಳಲು ಬಯಸಬಹುದು ಎಂದು ಚೋಪ್ರಾ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!