IPL-2024 | ಲಕ್ನೋ ವಿರುದ್ಧ ರಾಜಸ್ಥಾನಕ್ಕೆ ಗೆಲುವಿನ ಶುಭಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕನ್ನಡಿಗ ಕೆ.ಎಲ್​. ರಾಹುಲ್​ ನಾಯಕತ್ವದ ಲಕ್ನೋ ಸೂಪರ್​ ಜೈಂಟ್ಸ್​ ಮತ್ತು ಸಂಜು ಸ್ಯಾಮ್​ಸನ್​ ಕ್ಯಾಪ್ಟನ್ಸಿಯ ರಾಜಸ್ಥಾನ ರಾಯಲ್ಸ್​ ನಡುವಿನ ಪಂದ್ಯದಲ್ಲಿ ಆರ್​ಆರ್​ ಭರ್ಜರಿ ಗೆಲುವು ದಾಖಲಿದೆ .

ಮೊದಲು ಟಾಸ್​ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ರಾಯಲ್ಸ್​, 20 ಓವರ್​ಗಳಲ್ಲಿ ನಾಲ್ಕು ವಿಕೆಟ್​ ನಷ್ಟಕ್ಕೆ 193 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಗುರಿಯನ್ನು ಬೆನ್ನಟ್ಟಿದ ಲಕ್ನೋ ಪಡೆ ಆರಂಭದಲ್ಲೇ ಟ್ರೆಂಟ್ ಬೋಲ್ಟ್​​ ಬೋಲಿಂಗ್ ದಾಳಿಗೆ ಕ್ವಿಂಟನ್​ ಡಿಕಾಕ್ ಮತ್ತು ದೇವದತ್ತ ಪಡಿಕಲ್​​ ಅವರ ವಿಕೆಟ್​ ಕಳೆದುಕೊಂಡು ಭಾರೀ ಹಿನ್ನೆಡೆ ಅನುಭವಿಸಿತು.

ತದನಂತರ ಕ್ರೀಸ್​ನಲ್ಲಿ ಬೇರೂರಿ ನಿಂತ ಕ್ಯಾಪ್ಟನ್ ಕೆ.ಎಲ್. ರಾಹುಲ್ 44 ಎಸೆತಗಳಲ್ಲಿ​ 58 ರನ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು. ಇನ್ನು ಸಿಕ್ಸ್​, ಫೋರ್ಸ್​ಗಳನ್ನು ಬ್ಯಾಕ್ ಟು ಬ್ಯಾಕ್​ ಸಿಡಿಸಿದ ನಿಕೋಲಸ್​ ಪೂರನ್ ಬ್ಯಾಟಿಂಗ್ ಅಬ್ಬರದಿಂದ ಲಕ್ನೋ ಸೂಪರ್​ ಜೈಂಟ್ಸ್​ ತನ್ನ ಮೊದಲ ಗೆಲುವು ದಾಖಲಿಸುವಲ್ಲಿ ವಿಫಲವಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!