ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ ಬ್ಯಾಟಿಂಗ್ ಅಬ್ಬರಕ್ಕೆ ಇಂದು ಲಕ್ನೋ ಸೂಪರ್ ಜೈಂಟ್ಸ್ ಕಡಿವಾಣ ಹಾಕಿದ್ದು, 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 190 ರನ್ಗಳ ಸಾಧಾರಣ ಮೊತ್ತ ದಾಖಲಿಸಿದೆ.
ಮೊದಲು ಬ್ಯಾಟಿಂಗ್ ಇಳಿದ ಹೈದರಾಬಾದ್ ಗೆ ಆರಂಭದಲ್ಲೇ ಆಘಾತ ಎದುರಾಗಿದ್ದು, ಶಾರ್ದೂಲ್ ಠಾಕೂರ್ 3ನೇ ಓವರ್ನಲ್ಲಿ ಅಭಿಷೇಕ್ ವರ್ಮಾ (6) ಹಾಗೂ ಇಶಾನ್ ಕಿಶನ್(0) ವಿಕೆಟ್ ಪಡೆದು ಶಾಕ್ ನೀಡಿದರು.
ಬಳಿಕ3ನೇ ವಿಕೆಟ್ಗೆ ಒಂದಾದ ಟ್ರಾವಿಸ್ ಹೆಡ್ ಹಾಗೂ ನಿತೀಶ್ ರೆಡ್ಡಿ ಅರ್ಧಶತಕದ ಜೊತೆಯಾಟ ನಡೆಸಿ ತಂಡಕ್ಕೆ ಚೇತರಿಕೆ ನೀಡಿದರು. 28 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ನೆರವಿನಿಂದ 47 ರನ್ಗಳಿಸಿದ್ದ ಹೆಡ್ ರನ್ನ ಕ್ಲೀನ್ ಬೌಲ್ಡ್ ಆದರು.
ಬಳಿಕ ನಿತೀಶ್ ಜೊತೆ ಸೇರಿ 4ನೇ ವಿಕೆಟ್ಗೆ 34 ರನ್ಗಳ ಜೊತೆಯಾಟ ನೀಡಿದ್ದ ಕ್ಲಾಸೆನ್(24) ರನ್ ಔಟ್ ಗೆ ಬಲಿಯಾದರು. ಇದರ ಬೆನ್ನಲ್ಲೇ 28 ಎಸೆತಗಳಲ್ಲಿ 32 ರನ್ಗಳಿಸಿದ್ದ ನಿತೀಶ್ ಕುಮಾರ್ ರೆಡ್ಡಿ ರವಿ ಬಿಷ್ಣೋಯ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.
ಅನಿಕೇತ್ ವರ್ಮಾ 15 ಎಸೆತಗಳಲ್ಲಿ 5 ಸಿಕ್ಸರ್ಗಳ ಸಹಿತ 36 ರನ್ಗಳಿಸಿ ಔಟ್ ಆದರು. ಕನ್ನಡಿಗ ಅಭಿನವ್ ಮನೋಹರ್ 6 ಎಸೆತಗಳಲ್ಲಿ ಕೇವಲ 2ರನ್ಗಳಿಸಿ ಔಟ್ ಆದರು. ನಾಯಕ ಪ್ಯಾಟ್ ಕಮಿನ್ಸ್ ಕೇವಲ 4 ಎಸೆತಗಳಲ್ಲಿ 3 ಸಿಕ್ಸರ್ಗಳ ನೆರವಿನಿಂದ 18 ರನ್ಗಳಿಸಿ ಔಟ್ ಆದರು. ಶಮಿ 1, ಹರ್ಷಲ್ ಪಟೇಲ್ ಅಜೆಯ 12 ರನ್ಗಳಿಸಿದರು.
ಲಕ್ನೋ ಪರ ಶಾರ್ದೂಲ್ ಠಾಕೂರ್ 24ಕ್ಕೆ 4 ವಿಕೆಟ್ ಪಡೆದು ಮಿಂಚಿದರೆ, ಆವೇಶ್ ಖಾನ್, ದಿಗ್ವೇಶ್ ರಥಿ, ಪ್ರಿನ್ಸ್ ಯಾದವ್ ಹಾಘೂ ರವಿ ಬಿಷ್ಭೋಯ್ ತಲಾ 1 ವಿಕೆಟ್ ಪಡೆದರು.