July 24, 2026
Friday, July 24, 2026
spot_img

ಐಪಿಎಲ್ 2026 ಪ್ಲೇಆಫ್ ಧಮಾಕಾ: ಇಂದು ಮೊದಲ ಕ್ವಾಲಿಫೈಯರ್‌ನಲ್ಲಿ ಜಿಟಿ ಸವಾಲು ಎದುರಿಸಲಿರುವ ಆರ್‌ಸಿಬಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದ ಐಪಿಎಲ್ 2026 ರ ಪ್ಲೇಆಫ್ ಹಂತ ಇಂದಿನಿಂದ ಆರಂಭವಾಗಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಪರಸ್ಪರ ಸೆಣಸಾಡಲಿವೆ. ಧರ್ಮಶಾಲಾದ ಹೆಚ್‌ಪಿಸಿಎ ಮೈದಾನದಲ್ಲಿ ಇಂದು ಸಂಜೆ 7:30 ಕ್ಕೆ ಈ ಹೈ-ವೋಲ್ಟೇಜ್ ಪಂದ್ಯ ಆರಂಭವಾಗಲಿದೆ.

ನೇರ ಫೈನಲ್‌ಗೇರಲು ಸುವರ್ಣ ಅವಕಾಶ

2026ರ ಲೀಗ್ ಮುಕ್ತಾಯದ ನಂತರ ಅಂಕಪಟ್ಟಿಯಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿದ್ದರೆ, ಗುಜರಾತ್ ಟೈಟಾನ್ಸ್ ಎರಡನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡವು ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಮಹಾ ಫೈನಲ್‌ಗೆ ನೇರ ಪ್ರವೇಶ ಪಡೆಯಲಿದೆ. ಇನ್ನು ಸೋತ ತಂಡಕ್ಕೆ ಟೂರ್ನಿಯಿಂದ ಹೊರಬೀಳುವ ಆತಂಕ ಇರುವುದಿಲ್ಲ, ಬದಲಿಗೆ ಮೇ 29 ರಂದು ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಆಡಲು ಮತ್ತೊಂದು ಸುವರ್ಣ ಅವಕಾಶ ಸಿಗಲಿದೆ.

ಉಭಯ ತಂಡಗಳ ಬಲಾಬಲ

ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ತಂಡವು ಈ ಬಾರಿ ಭರ್ಜರಿ ಫಾರ್ಮ್‌ನಲ್ಲಿದ್ದು, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಇತ್ತ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ಕೂಡ ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡಿ ಆರ್‌ಸಿಬಿಗೆ ಸಮಾನವಾದ 18 ಅಂಕಗಳನ್ನು ಗಳಿಸಿದೆ. ಧರ್ಮಶಾಲಾದ ವೇಗದ ಪಿಚ್‌ನಲ್ಲಿ ಉಭಯ ತಂಡಗಳ ವೇಗದ ಬೌಲರ್‌ಗಳ ಪ್ರದರ್ಶನ ಇಂದಿನ ಪಂದ್ಯದ ಗತಿಯನ್ನು ನಿರ್ಧರಿಸಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !