October 9, 2026
Friday, October 9, 2026
spot_img

IPL | ಪ್ಲೇ ಆಫ್‌ಗೆ ಫೈನಲ್‌ ಆದ ತಂಡಗಳು, ವೇಳಾಪಟ್ಟಿಗಳು ಹೀಗಿವೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಬಾರಿಯ ಐಪಿಎಲ್‌ ಪ್ರೀಮಿಯರ್‌ ಲೀಗ್‌ ಫೈನಲ್‌ ಹಂತಕ್ಕೆ ಬಂದು ತಲುಪಿದ್ದು, ಹತ್ತು ತಂಡಗಳು ಮುಂದಕ್ಕೆ ಬಂದಿದೆ.

ಈಗಾಗಲೇ ಆರು ತಂಡಗಳು ಐಪಿಎಲ್‌ ಜರ್ನಿ ಮುಗಿಸಿದ್ದು, ಬರೀ ನಾಲ್ಕು ತಂಡಗಳು ಮಾತ್ರ ಫೈನಲ್ಸ್‌ಗೆ ಪ್ರವೇಶಿಸಿವೆ. ಐಪಿಎಲ್‌ನ ಮೊದಲ ಕ್ವಾಲಿಫೈಯರ್‌ ಪಂದ್ಯ ನಾಳೆ ನಡೆಯುತ್ತಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟಾನ್ಸ್‌ ನಡುವೆ ಜಟಾಪಟಿ ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಹಮದಾಬಾದ್‌ನಲ್ಲಿರುವ ಫೈನಲ್‌ ಪಂದ್ಯಕ್ಕೆ ಪ್ರವೇಶ ಪಡೆಯಲಿದೆ. ಸೋತ ತಂಡಕ್ಕೂ ಮತ್ತೊಂದು ಅವಕಾಶ ಸಿಗಲಿದೆ. ಇನ್ನು ನಾಡಿದ್ದು ರಾಜಸ್ಥಾನ ರಾಯಲ್ಸ್‌ ಹಾಗೂ ಹೈದರಾಬಾದ್‌ ತಂಡಗಳು ಎಲಿಮಿನೇಟರ್‌ ಗೇಮ್‌ ಆಡಲಿದೆ. ಇದರಲ್ಲಿ ಸೋತ ತಂಡ ಟೂರ್ನಿಯಿಂದ ಹೊರಗೆ ಹೋಗಲಿದೆ. ಗೆದ್ದ ತಂಡ ಕ್ವಾಲಿಫೈಯರ್‌ಗೆ ಎಂಟ್ರಿ ಪಡೆಯಲಿದೆ.

ಇನ್ನು 29ರಂದು ನಡೆಯುವ ಪಂದ್ಯದಲ್ಲಿ ಕ್ವಾಲಿಫೈಯರ್‌ ಒಂದು ಹಾಗೂ ಎರಡರದಲ್ಲಿ ಸೋತ ಹಾಗೂ ಎಲಿಮಿನೇಟರ್‌ ಪಂದ್ಯದಲ್ಲಿ ಗೆದ್ದ ಟೀಂ ಮುಖಾಮುಖಿಯಾಗಲಿದೆ. ಇದರಲ್ಲಿ ಗೆದ್ದ ಟೀಂ ಫೈನಲ್ಸ್‌ಗೆ ಪ್ರವೇಶಿಸಲಿದೆ. ಇದೇ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್‌ ಮ್ಯಾಚ್‌ ನಡೆಯಲಿದೆ.

Must Read