ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ನ ಮೆಗಾ ಹರಾಜಿಗೆ ಬೆಂಗಳುರಿನ ವೇದಿಕೆ ಸಜ್ಜಾಗಿದ್ದು, ಯಾವ ತಂಡಕ್ಕೆ ಯಾವ ಆಟಗಾರ ಆಯ್ಕೆಯಾಗಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಐಪಿಎಲ್ ನ 8 ತಂಡಗಳ ಜತೆ ಈ ಬಾರಿ ಮತ್ತೆರಡು ತಂಡಗಳು ಸೇರಿ ಒಟ್ಟು 10 ತಂಡಗಳು ಬಿಡ್ ನಲ್ಲಿ ಹಾಜರಿರುತ್ತವೆ.
ಈ ಹರಾಜಿನಲ್ಲಿ ಪ್ರತಿ ತಂಡ ಕನಿಷ್ಠ 18 ಮಂದಿಯಂತೆ ಗರಿಷ್ಠ 25 ಜನರನ್ನು ಆಯ್ಕೆ ಮಾಡಲಾಗುತ್ತಿದೆ.
ಪ್ರತಿ ತಂಡ ತನ್ನ ಆಟಗಾರರ ಮೇಲೆ ಗರಿಷ್ಠ 90 ಕೋಟಿ ರೂ. ವರೆಗೆ ಖರ್ಚು ಮಾಡಬಹುದಾಗಿದ್ದು, ಕನಿಷ್ಠ 67.5 ಕೋಟಿ ರೂ. ಬಳಸಬೇಕಾಗುತ್ತದೆ.
ಉದಾ: ಆರ್ ಸಿ ಬಿ ಈಗಾಗಲೇ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಸಿರಾಜ್ ಗೆ ಒಟ್ಟು 33 ಕೋಟಿ ರೂ. ನೀಡಿದ್ದು, ಇನ್ನು ಉಳಿದಿರುವ 57 ಕೋಟಿ ರೂ. ನಲ್ಲಿ ಆರ್ ಸಿಬಿ ಉಳಿದ ಆಟಗಾರರನ್ನು ಆಯ್ಕೆ ಮಾಡಬೇಕಿದೆ.
ಯಾವ ತಂಡದ ಬಳಿ ಎಷ್ಟು ಹಣವಿದೆ?
ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ 48 ಕೋಟಿ ರೂ., ದೆಹಲಿ ಕ್ಯಾಪಿಟಲ್ಸ್: 47.5 ಕೋಟಿ ರೂ., ಗುಜರಾತ್ ಟೈಟಾನ್ಸ್: 52 ಕೋಟಿ ರೂ., ರಾಯಲ್ ಚಾಲೆಂಜರ್ಸ್ ಬೆಂಗಳೂರು: 57 ಕೋಟಿ ರೂ., ಲಕ್ನೋ ಸೂಪರ್ಜೈಂಟ್: 59 ಕೋಟಿ ರೂ., ರಾಜಸ್ಥಾನ್ ರಾಯಲ್ಸ್: 62 ಕೋಟಿ ರೂ., ಸನ್ ರೈಸರ್ಸ್ ಹೈದರಾಬಾದ್: 68 ಕೋಟಿ ರೂ., ಪಂಜಾಬ್ ಕಿಂಗ್ಸ್: 72 ಕೋಟಿ ರೂ. ಹಣ ಇದೆ.