ಐಪಿಎಲ್‌ ಹರಾಜು 2022: ಭಾರೀ ಮೊತ್ತದಲ್ಲಿ ಲಿಯಾಮ್‌ ಲಿವಿಂಗ್‌ ಸ್ಟೋನ್‌ ರನ್ನು ಖರೀದಿಸಿದ ಪಂಜಾಬ್‌ ಕಿಂಗ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದು ಎರಡನೇ ಹಂತದಲ್ಲಿ ಐಪಿಎಲ್‌ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಈ ವೇಳೆ ದುಬಾರಿ ಮೊತ್ತದಲ್ಲಿ ಲಿಯಾಮ್‌ ಲಿವಿಂಗ್‌ ಸ್ಟೋನ್‌ ರನ್ನು ಪಂಜಾಬ್‌ ಕಿಂಗ್ಸ್‌ ಖರೀದಿಸಿದೆ.

ಪಂಜಾಬ್‌ ಕಿಂಗ್ಸ್‌ ಲಿಯಾಮ್‌ ಲಿವಿಂಗ್‌ ಸ್ಟೋನ್‌ ರನ್ನು ಬರೋಬ್ಬರಿ 11.5 ಕೋಟಿ ರೂ. ಗೆ ಖರೀದಿ ಮಾಡಿದೆ.

ಇನ್ನುಳಿದಂತೆ ಕೃಷ್ಣಪ್ಪ ಗೌತಮ್ ರನ್ನು ಲಖನೌ ಸೂಪರ್ ಜೇಂಟ್ಸ್ 90 ಲಕ್ಷ ರೂ.ಗೆ ಖರೀದಿ ಮಾಡಿದೆ. ಚೆನ್ನೈ ಸೂಪರ್ ಕಿಂಗ್ಸ್ ಶಿವಮ್ ದುಬೆ ಗೆ 4 ಕೋಟಿ ರೂ ಕೊಟ್ಟಿದೆ.
ಮಾರ್ಕೊ ಜೇನ್ ಸೇನ್ ರನ್ನು ಸನ್ ರೈಸರ್ಸ್ ಹೈದರಾಬಾದ್ 4.20 ಕೋಟಿ ರೂ. ಗೆ ಖರೀದಿ ಮಾಡಿದೆ.

ಒಡಿಯನ್ ಸ್ಮಿತ್ ಗೆ ಪಂಜಾಬ್ ಕಿಂಗ್ಸ್ 6 ಕೋಟಿ ರೂ. ಗೆ ಖರೀದಿಸಿದೆ. ವಿಜಯ್ ಶಂಕರ್ ಗೆ ಗುಜರಾತ್ ಟೈಟನ್ಸ್ ಗೆ 1.40 ಕೋಟಿ ರೂ. ಘೊಷಿಸಿದೆ.

ಜಯಂತ್ ಯಾದವ್ ಗೆ ಗುಜರಾತ್ ಟೈಟನ್ಸ್ 1.70 ಕೋಟಿ ರೂ., ಡೋಮಿನಿಕ್  ಡ್ರೆಕ್ ಗೆ ಗುಜರಾತ್ ಟೈಟನ್ಸ್ 1.10 ಕೋಟಿ ರೂ., ಲಿಯಾಮ್ ಲಿವಿಂಗ್ ಸ್ಟೋನ್ ಗೆ ಪಂಜಾಬ್ ಕಿಂಗ್ಸ್ 11.5 ಕೋಟಿ ರೂ., ಮನ್ ದೀಪ್ ಸಿಂಹ್  ಗೆ ದಿಲ್ಲಿ ಕ್ಯಾಪಿಟಲ್ಸ್ 1.1 ಕೋಟಿ ರೂ., ಅಜಂಕ್ಯಾ ರಹಾನೆ ರನ್ನು ಕೊಲ್ಕತ್ತಾ ನೈಟ್ ರೈಡರ್ಸ್  1 ಕೋಟಿ ರೂ. ಗೆ ಖರೀದಿಸಿದೆ.

ಏಡನ್ ಮಾರ್ಕಮ್ ಗೆ ಸನ್ ರೈಸರ್ಸ್ ಹೈದ್ರಾಬಾದ್ 2.9 ಕೋಟಿ ರೂ. ಗೆ ಖರೀದಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here