ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡಗಳಿಗೆ ಬೇಕಾದ ಆಟಗಾರರನ್ನ ಖರೀದಿ ಮಾಡುತ್ತಿವೆ. ಇಶನ್ ಕಿಶನ್ ಕೂಡ ಉತ್ತಮ ಮಟ್ಟದ ಹಣವನ್ನು ಪಡೆದುಕೊಂಡಿದ್ದಾರೆ.
ಟೀಮ್ ಇಂಡಿಯಾ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿರುವ ಇಶನ್ ಕಿಶನ್ ಅವರು ಈ ಹಿಂದೆ ಮುಂಬೈ ಟೀಮ್ನಲ್ಲಿದ್ದರು. ಆದರೆ ಈ ಬಾರಿ ಅವರನ್ನು ಕೈ ಬಿಡಲಾಗಿದ್ದು ಹರಾಜಿನಲ್ಲಿ ಇಶನ್ ಕಿಶನ್ ಅವರ ಹೆಸರನ್ನು ಕರೆಯಲಾಗಿತ್ತು. ಅದರಂತೆ ಮೊದಲಿಂದಲೂ ಹೆಸರನ್ನು ನಿರಂತವಾಗಿ ಕರೆಯಲಾಯಿತು. ಡೆಲ್ಲಿ ಹಾಗೂ ಪಂಜಾಬ್ ನಡುವೆ ಕಿಶನ್ಗಾಗಿ ಒಳ್ಳೆಯ ಬಿಡ್ ನಡೆದಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 10 ಕೋಟಿಗಳನ್ನು ಕರೆದಿತ್ತು. ಇದೇ ವೇಳೆ ಹೈದ್ರಾಬಾದ್ ಟೀಮ್ 10.25 ಕೋಟಿ ರೂಪಾಯಿಗಳನ್ನ ಕರೆಯಿತು. ಕೊನೆಯದಾಗಿ ಹೈದ್ರಾಬಾದ್ 11.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತು.