ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮೆಗಾ ಹರಾಜು ನಲ್ಲಿ ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಕ್ನೋ ಟೀಮ್ ಪಾಲಾಗಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಪಂಜಾಬ್ ಟೀಮ್ಗೆ 26.75 ಕೋಟಿ ರೂಪಾಯಿಗೆ ಸೇಲ್ ಆಗಿದ್ದಾರೆ. ಇದೀಗ ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮದೇ ಆಟಗಾರನ ಮೇಲೆ ಭಾರೀ ಹಣ ಸುರಿದು ಖರೀದಿ ಮಾಡಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ತಮ್ಮದೇ ತಂಡದ ಆಟಗಾರ ಆಗಿರುವ ವೆಂಕಟೇಶ್ ಅಯ್ಯರ್ ಮೇಲೆ ಒಟ್ಟು 23.75 ಕೋಟಿ ಬಿಡ್ ಮಾಡಿದೆ.
ವೆಂಕಟೇಶ್ ಅಯ್ಯರ್ ಹೆಸರು ಹರಾಜಿಗೆ ಕರೆದಾಗ ಆರ್ಸಿಬಿ ಫ್ರಾಂಚೈಸಿಯು ಸಖತ್ ಪೈಪೋಟಿ ನೀಡಿತು. ಬರೋಬ್ಬರಿ 23.50 ಕೋಟಿ ರೂಪಾಯಿಗಳವರೆಗೆ ಆರ್ಸಿಬಿ ಹರಾಜು ಕರೆದಿತ್ತು. ಈ ಹರಾಜಿನಲ್ಲಿ ಆರ್ಸಿಬಿ ಹಾಗೂ ಕೋಲ್ಕತ್ತಾ ನಡುವೆ ಭಾರೀ ಬಿಡ್ ನಡೆದಿತ್ತು. ಆದರೆ ಕೊನೆಗೆ ಈ ಬಿಡ್ನಲ್ಲಿ ಕೋಲ್ಕತ್ತಾವೇ ಗೆಲುವು ಪಡೆಯಿತು.