April 5, 2026
Sunday, April 5, 2026
spot_img

IPL | ತಂಡಕ್ಕೆ ಆಸರೆಯಾದ ನಾಯಕ ಪಂತ್: ಲಖನೌ ಸೂಪರ್ ಜೈಂಟ್ಸ್ ಗೆ ಗೆಲುವಿನ ಶುಭಾರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ಕೊನೆಗೂ ಗೆಲುವಿನ ಶುಭಾರಂಭ ಮಾಡಿಕೊಂಡಿದೆ.

ಹೈದರಾಬಾದ್​ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸನ್‌ರೈಸರ್ಸ್ 157 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಲಕ್ನೋ ತಂಡ ಕೊನೆಯ ಓವರ್​ನಲ್ಲಿ ಗೆಲುವಿನ ದಡ ತಲುಪಿದೆ. ನಾಯಕ ಪಂತ್ ಕೊನೆಯ ಓವರ್​ ವರೆಗೂ ಬ್ಯಾಟಿಂಗ್ ನಡೆಸಿ ಅಜೇಯ 68 ರನ್​ಗಳಿಸಿ ಗೆಲುವಿನ ರೂವಾರಿಯಾದರು.

ಗುರಿಯನ್ನ ಬೆನ್ನಟ್ಟಿದ ಲಖನೌ ಸೂಪರ್ ಜೈಂಟ್ಸ್ ಗೆ ಮಿಚೆಲ್ ಮಾರ್ಷ್​ ಹಾಗೂ ಐಡೆನ್ ಮಾರ್ಕ್ರಮ್ 37 ರನ್​ಗಳ ಜೊತೆಯಾಟ ನೀಡಿದರು.ಮಾರ್ಷ್ ಕೇವಲ 14 ರನ್ ಗೆವಿಕೆಟ್ ಒಪ್ಪಿಸಿದರು. 2ನೇ ವಿಕೆಟ್​​ಗೆ ಒಂದಾದ ರಿಷಭ್ ಪಂತ್ ಹಾಗೂ ಮಾರ್ಕ್ರಮ್ 40 ರನ್​ ನೀಡಿ ಚೇತರಿಕೆ ನೀಡಿದರು.ಮಾರ್ಕ್ರಮ್ 27 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್​ಗಳ ಸಹಿತ 45 ರನ್​ಗಳಿಸಿ ಶಿವಾಂಗ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು.

ನಂತರ ಆಯುಷ್ ಬದೋನಿ ಕೇವಲ 12 ರನ್‌ಗಳಿಗೆ ಆಟ ಕೊನೆಗೊಂಡಿತು. ನಿಕೋಲಸ್ ಪೂರನ್ ಕೇವಲ 1 ರನ್‌ಗೆ ಔಟಾದರು. ಆದರೆ ನಾಯಕನ ಆಟವನ್ನಾಡಿದ ರಿಷಭ್ ಪಂತ್ ಅರ್ಧಶತಕವನ್ನು ಸಹ ಪೂರೈಸಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು 9 ರನ್‌ಗಳು ಅವಶ್ಯಕತೆ ಇತ್ತು. ಈ ವೇಳೆ ಪಂತ್ ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !