ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಏಪ್ರಿಲ್ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬಂಧಿತರನ್ನು ಧ್ರುವ್ ಮಿತ್ತಲ್, ರೋಹಿತ್ ರಂಜನ್ ಹಾಗೂ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮಧ್ಯೆ ಪಂದ್ಯ ನಡೆದಿತ್ತು. ಆ ಪಂದ್ಯದ ವೇಳೆ ಆರೋಪಿಗಳು ಬೆಟ್ಟಿಂಗ್ ದಂಧೆ ನಡೆಸಿದ್ದರು. ಮೈದಾನದಲ್ಲಿ ಕುಳಿತು ವೀಕ್ಷಿಸುವ ಪಂದ್ಯಕ್ಕೂ ಹಾಗೂ ಅದೇ ಪಂದ್ಯದ ಟಿ.ವಿ ನೇರ ಪ್ರಸಾರಕ್ಕೂ ಕೆಲವು ಸೆಕೆಂಡ್ ಅಂತರ ಇರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ಪ್ರತಿ ಬಾಲ್‌ನ ಮೇಲೆ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಫೋರ್, ಸಿಕ್ಸ್, ನೋ ಬಾಲ್, ವೈಡ್ ಎಸೆತದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಸಿಸಿಬಿ ಪೊಲೀಸರು ತಿಳಿಸಿದರು.
ಆರೋಪಿಗಳಿಂದ ₹85 ಲಕ್ಷ ನಗದು ಹಾಗೂ ಬೆಟ್ಟಿಂಗ್ ಟೋಕನ್‌ಗಳನ್ನು ಜಪ್ತಿ ಮಾಡಲಾಗಿದೆ.