ಭಾರತ ಸಹಿತ ವಿಶ್ವದಾದ್ಯಂತ ವ್ಯಾಟ್ಸ್‌ಆ್ಯಪ್‌ ಸೇವೆ ಡೌನ್: ಬಳಕೆದಾರರು ಪರದಾಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಸೇರಿದಂತೆ ವಿಶ್ವದಾದ್ಯಂತ ವಾಟ್ಸ್ ಆಪ್ ಸೇವೆ ಡೌನ್ ಆಗಿದ್ದು, ಬಳಕೆದಾರರು ತೊಂದರೆ ಅನುಭವಿಸಿದ್ದಾರೆ.

ಕೆಲವು ಬಳಕೆದಾರರು ಇಂದು ಸಂಜೆ ಮೆಟಾ-ಮಾಲೀಕತ್ವದ ಅಪ್ಲಿಕೇಶನ್ ನಲ್ಲಿ ತಮ್ಮ ಸ್ಟೇಟಸ್ಗಳನ್ನು ಅಪ್ಲೋಡ್ ಮಾಡಲು ಅಥವಾ ಸಂದೇಶಗಳನ್ನು ಕಳುಹಿಸಲು ತೊಂದರೆ ಆಗುತ್ತಿರುವ ಕುರಿತು ದೂರು ನೀಡಿದ್ದಾರೆ.

ಸಮಸ್ಯೆಗಳ ಪತ್ತೆ ಹಚ್ಚುವ ಡೌನ್‌ಡಿಟೆಕ್ಟರ್‌ ವರದಿ ಪ್ರಕಾರ ಸಂಜೆ 5:22ರ ವೇಳೆಗೆ ವ್ಯಾಟ್ಸ್‌ಆ್ಯಪ್‌ನಲ್ಲಿ ಸಮಸ್ಯೆ ಎದುರಾಗುತ್ತಿರುವ ಬಗ್ಗೆ 597 ದೂರು ಬಂದಿದೆ. ಈ ಪೈಕಿ ಶೇ. 85ರಷ್ಟು ಮಂದಿ ಮೆಸೇಜ್‌ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಇನ್ನು ಶೇ. 12ರಷ್ಟು ಮಂದಿಗೆ ಆ್ಯಪ್‌ನಲ್ಲೇ ಸಮಸ್ಯೆ ಎದುರಾಗಿದೆ. ಲಾಗಿನ್‌ ಸಮಸ್ಯೆ ಎದುರಾಗಿದ್ದು ಶೇ. 3ರಷ್ಟು ಮಂದಿಗೆ. ಈ ಬಗ್ಗೆ ಹಲವರು ವಿವಿಧ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Imageಯುಪಿಐಯಲ್ಲಿಯೂ ಸಮಸ್ಯೆ
ಶನಿವಾರ ಮಧ್ಯಾಹ್ನ ಯುಪಿಐ ಮೂಲಕ ಡಿಜಿಟಲ್ ಪಾವತಿ ಸಾಧ್ಯವಾಗದೆ ರಾಷ್ಟ್ರವ್ಯಾಪಿ ಗ್ರಾಹಕರು ಸಮಸ್ಯೆ ಎದುರಿಸಿದರು. ಸಂಜೆ ವೇಳೆಗೆ ಆ ಸಮಸ್ಯೆ ಬಗರಹರಿದಿದೆ ಎಂದು ಮೂಲಗಳು ತಿಳಿಸಿವೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!