ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಐಪಿಎಲ್ ಹಬ್ಬ ಆರಂಭವಾಗಲಿದ್ದು ಕೋಲ್ಕತ್ತಾದಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ತಂಡಗಳ ನಡವೆ ಮೊದಲ ಪಂದ್ಯ ನಡೆಯಲಿದೆ.
ಆರ್‌ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್ ಅವರ “ಅಭಿಮಾನಿಗಳೇ ನಮ್ಮ ದೇವರು” ಡೈಲಾಗ್ ಹೊಡೆದು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಚಾಂಪಿಯನ್ ಆಗದೇ ಇದ್ದರೂ ಆರ್‌ಸಿಬಿ ಮೇಲೆ ಅಭಿಮಾನಿಗಳ ಪ್ರೀತಿ ಮಾತ್ರ ಕಮ್ಮಿಯಾಗಿಲ್ಲ. ಸ್ಟೇಡಿಯಂನಲ್ಲಿ ಆರ್‌ಸಿಬಿ ಆರ್‌ಸಿಬಿ…ಧ್ವನಿ ಮೊಳಗುತ್ತಿರುತ್ತದೆ. ಈ ಕಾರಣಕ್ಕೆ ಐಪಿಎಲ್ ಆರಂಭಕ್ಕೆ ಮೊದಲು ನಾಯಕ ರಜತ್ ಪಾಟಿದಾರ್ ಅವರು ಮಿಸ್ಟರ್ ನ್ಯಾಗ್ಸ್ ಅವರ ಆರ್‌ಸಿಬಿ ಇನ್‌ಸೈಡ್ ಶೋನಲ್ಲಿ ಅಭಿಮಾನಿಗಳೇ ನಮ್ಮ ದೇವರು ಎಂದು ಹೆಮ್ಮೆಯಿಂದ ಹೇಳಿದ್ದಾರೆ.