IPL ಫೈನಲ್ಸ್‌ಗೆ ಗಂಟೆಗಳಷ್ಟೇ ಬಾಕಿ: ಆರ್‌ಸಿಬಿಗೆ ಶಾಕ್‌ ಮೇಲೆ ಶಾಕ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಫೈನಲ್‌ ಪಂದಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ಆರ್‌ಸಿಬಿಗೆ ಡಬಲ್‌ ಆಘಾತವಾಗಿದೆ. ಫಿಲ್‌ ಸಾಲ್ಟ್‌ ಆಡುವುದು ಅನುಮಾನ ಎನ್ನುವಾಗಲೇ ಆಲ್‌ರೌಂಡರ್‌ ಟಿಮ್‌ ಡೇವಿಡ್‌ ಈ ಪಂದ್ಯದಲ್ಲಿ ಆಡುತ್ತಾರಾ ಇಲ್ಲವೋ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

ಸ್ನಾಯುಸೆಳೆತಕ್ಕೆ ಒಳಗಾಗಿರುವ ಟಿಮ್ ಡೇವಿಡ್ ಲಕ್ನೋ ಮತ್ತು ಪಂಜಾಬ್‌ ವಿರುದ್ಧದ ಕ್ವಾಲಿಫೈಯರ್‌ ಪಂದ್ಯ ಆಡಿಲ್ಲ. ಈ ಬಗ್ಗೆ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ.

ಈ ಪ್ರಶ್ನೆಗೆ ಪಾಟಿದಾರ್‌, ಇಲ್ಲಿಯವರೆಗೆ ಟಿಮ್ ಡೇವಿಡ್ ಬಗ್ಗೆ ನನಗ್ಯಾವ ಐಡಿಯಾವೂ ಇಲ್ಲ. ಡಾಕ್ಟರ್ ಈ ಬಗ್ಗೆ ನಿಗಾ ಇರಿಸಿದ್ದಾರೆ. ವೈದ್ಯರು ಸಂಜೆ ನಮಗೆ ಮಾಹಿತಿ ನೀಡಲಿದ್ದಾರೆ ಎಂದು ಉತ್ತರಿಸಿದರು. ವೈದ್ಯರು  ಅನುಮತಿ ನೀಡಿದರೆ ಡೇವಿಟ್‌ ಆರ್‌ಸಿಬಿ ಯ ಪ್ಲೇಯಿಂಗ್‌ 11 ಸೇರಲಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!