April 8, 2026
Wednesday, April 8, 2026
spot_img

IPL | ಡೆಲ್ಲಿ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕುತ್ತಾ ಗುಜರಾತ್: ಟಾಸ್ ಗೆದ್ದ ಅಕ್ಷರ್ ಬೌಲಿಂಗ್ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಇಂದಿನ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್,ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಅಕ್ಷರ್ ಪಟೇಲ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಬಾರಿ ಟೂರ್ನಿಯಲ್ಲಿ ಡೆಲ್ಲಿ ತನ್ನ ಎರಡೂ ಪಂದ್ಯಗಳನ್ನು ಗೆದ್ದಿದೆ.ಮೂರನೇ ಗೆಲುವಿನ ಓಟಕ್ಕೆ ಸಜ್ಜಾಗಿದೆ. ಮತ್ತೊಂದೆಡೆ, ಎರಡು ಪಂದ್ಯಗಳನ್ನು ಸೋತಿರುವ ಗುಜರಾತ್ ಟೈಟಾನ್ಸ್ ಮೊದಲ ಗೆಲುವಿನ ಖಾತೆ ತೆರೆಯಲು ಕಾಯುತ್ತಿದೆ.

ಗುಜರಾತ್ ತಂಡ: ಸಾಯಿ ಸುದರ್ಶನ್, ಶುಭ್​ಮನ್ ಗಿಲ್, ಜೋಸ್ ಬಟ್ಲರ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್ ಮತ್ತು ಅಶೋಕ್ ಶರ್ಮಾ.

ದೆಹಲಿ ತಂಡ: ಕೆಎಲ್ ರಾಹುಲ್, ಪಾತುಮ್ ನಿಸ್ಸಾಂಕ, ನಿತೀಶ್ ರಾಣಾ, ವಿಪ್ರಾಜ್ ನಿಗಮ್, ಅಕ್ಸರ್ ಪಟೇಲ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಕುಲ್ದೀಪ್ ಯಾದವ್, ಲುಂಗಿ ಎನ್‌ಗಿಡಿ, ಟಿ ನಟರಾಜನ್, ಮುಖೇಶ್ ಕುಮಾರ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !