ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಯಲ್ ಚಾಲೆಂಜರ್ಸ್ ಮಹಿಳಾ ತಂಡ ಈಗಾಗಲೇ ಕಪ್ ಗೆದ್ದು ಅಭಿಮಾನಿಗಳ ಸಂತಸಕ್ಕೆ ಕಾರಣರಾಗಿದ್ದಾರೆ. ಈಗ ಪುರುಷರ ಐಪಿಎಲ್ ಪಂದ್ಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ ಮತ್ತು RCB ನಿನ್ನೆ ಅನ್ ಬಾಕ್ಸಿಂಗ್ ಕಾರ್ಯಕ್ರಮವನ್ನು ಆಯೋಜಿಸಿದ್ದು ಹಲವು ಮಹತ್ವದ ಬದಲಾವಣೆಗಳು ಮಾಡಲಾಗಿದೆ. ಇನ್ನು ಕೇವಲ ಒಂದೇ ದಿನದಲ್ಲಿ ಪಂದ್ಯ ಆರಂಭವಾಗಲಿದ್ದು, ಆರ್‌ಸಿಬಿ ಅಭಿಮಾನಿಗಳಿಗೆ ತಂಡದ ಹೊಸ ಜೆರ್ಸಿ ಖರೀದಿಸುವ ಅವಕಾಶವಿದೆ.
ಹೌದು. ನೀವು RCB ಅಭಿಮಾನಿಯೇ? ನೀವು ತಂಡದ ಜೆರ್ಸಿಯನ್ನು ಖರೀದಿಸಲು ಬಯಸುವಿರಾ? ಹಾಗಿದ್ದರೆ ಆರ್‌ಸಿಬಿ ಜೆರ್ಸಿಯನ್ನು ಪೂಮಾ ವೆಬ್‌ಸೈಟ್‌ನಲ್ಲಿ ಖರೀದಿಸಬಹುದು. ಹೌದು ಹೊಸ ಜೆರ್ಸಿಯ ಬೆಲೆ 4999 ರೂಪಾಯಿಯಲ್ಲಿ ಲಭ್ಯವಿದೆ.
ಐಪಿಎಲ್ ನಲ್ಲಿ ಆರ್‌ಸಿಬಿ ಪಂದ್ಯವನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಕೊಹ್ಲಿ ಈ ಬಾರಿ ಹೇಗೆ ಆಡಲಿದ್ದಾರೆ ಎಂಬುದನ್ನು ನೋಡಲು ಅವರ ಫ್ಯಾನ್ಸ್ ಗಳು ಕಾಯುತ್ತಿದ್ದಾರೆ. CSK ಮತ್ತು RCB ಮಾ. 22 ರಂದು ಮೊದಲ ಪಂದ್ಯದೊಂದಿಗೆ ತಮ್ಮ IPL 2024 ಅನ್ನು ಪ್ರಾರಂಭಿಸುತ್ತವೆ.
RCB jersey is available at the Puma website for 4,999rs INR. pic.twitter.com/g0M3DyL674
— Mufaddal Vohra (@mufaddal_vohra) March 19, 2024