May 17, 2026
Sunday, May 17, 2026
spot_img

IPL | ಆರ್​ಸಿಬಿ ಬೌಲಿಂಗ್ ಅಬ್ಬರಕ್ಕೆ ಎಡವಿದ ಪಂಜಾಬ್: ಪ್ಲೇಆಫ್​ ಗೆ ಎಂಟ್ರಿ ಕೊಟ್ಟ ಬೆಂಗಳೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಶಾಲಾ ಮೈದಾನದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಆರ್​ಸಿಬಿಯು ಬೌಲಿಂಗ್ ನಲ್ಲೂ ಕಮಾಲ್ ಮಾಡಿ ರೋಚಕ ಜಯ ಸಾಧಿಸಿದ್ದು, ಈ ಮೂಲಕ ಪ್ಲೇ ಆಫ್ ಗೆ ಎಂಟ್ರಿ ನೀಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ ಪರ, ಕೊಹ್ಲಿ (58), ವೆಂಕಟೇಶ್ ಅಯ್ಯರ್ (73) ಹಾಗೂ ದೇವದತ್ ಪಡಿಕ್ಕಲ್ (45) ಭರ್ಜರಿ ಬ್ಯಾಟಿಂಗ್ ನಡೆಸಿ 223 ರನ್ ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 199 ರನ್​ಗಳಿಸಿ ಸೋಲು ಅನುಭವಿಸಿತು.

ಪಂಜಾಬ್ ಗೆ ಕೈಕೊಟ್ಟ ಟಾಪ್ ಬ್ಯಾಟ್ಸ್ ಮ್ಯಾನ್ ಗಳು

ಪಂಜಾಬ್ ಪರ ಮೊದಲ ಓವರ್​ನಲ್ಲೇ ಪ್ರಿಯಾಂಶ್ ಆರ್ಯ ಖಾತೆ ತೆರೆಯದೇ ಔಟ್ ಆದರು. ನಂತರ ಬಂದ ಪ್ರಭಸಿಮ್ರನ್ ಸಿಂಗ್ 2 ರನ್​ಗಳಿಸಿ ಪೆವಿಲಿಯನ್ ನತ್ತ ಮುಖಮಾಡಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ 1 ರನ್​​ಗಳಿಸಿ ನಿರಾಸೆ ಮೂಡಿಸಿದರು.

ಶಶಾಂಕ್ ಹೋರಾಟಕ್ಕೆ ಸಿಗದ ಸಾಥ್

ಒಂದೆಡೆ ವಿಕೆಟ್ ಉರುಳುತಿದ್ದರೆ, ಅತ್ತ ಕೊನೊಲಿ ಹಾಗೂ ಸೂರ್ಯಂಶ್ ಶೆಡ್ಗೆ ತಂಡಕ್ಕೆ ಅಸೆರೆಯಾದರು. ಕೂಪರ್ ಕೊನೊಲಿ 37 ರನ್​ಗಳ ಕಾಣಿಕೆ ನೀಡಿದರು. ಯುವ ಬ್ಯಾಟರ್ ಸೂರ್ಯಾಂಶ್ ಶೆಡ್ಜ್ 35 ರನ್ ಗಳಿಸಿ ಔಟಾದರು. ನಂತರ ಬಂದ ಮಾರ್ಕಸ್ ಸ್ಟೊಯಿನಿಸ್ 37 ರನ್​ಗೆ ವಿಕೆಟ್ ಒಪ್ಪಿಸಿದರೆ, ಏಕಾಂಗಿ ಹೋರಾಟ ನಡೆಸಿದ ಶಶಾಂಕ್ ಸಿಂಗ್ 55 ರನ್ ಗಳಿಸಿದರೂ, ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲವಾದರು. ಇದರಿಂದ ಪಂಜಾಬ್ 23 ರನ್​ಗಳಿಂದ ಸೋಲನುಭವಿಸಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !