ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ಪ್ರೀಮಿಯರ್ ಲೀಗ್ನ 2022ರ ಆವೃತ್ತಿಯ ಟೈಟಲ್ ಪ್ರಾಯೋಜಕತ್ವವನ್ನು ಟಾಟಾ ಗ್ರೂಪ್ ಪಡೆದುಕೊಂಡಿದೆ. ಇಲ್ಲಿಯವರೆಗೆ ಚೀನಾದ ಮೊಬೈಲ್ ಉತ್ಪಾದನಾ ಕಂಪನಿ ವಿವೋ ಐಪಿಎಲ್ನ ಟೈಟಲ್ ಪ್ರಾಯೋಜಕತ್ವ ಪಡೆದುಕೊಂಡಿತ್ತು.ಇದೀಗ ಟಾಟಾ ಪಾಲಾಗಿದೆ.
ಈ ಕುರಿತು ಫ್ರಾಂಚೈಸಿ ಅಧ್ಯಕ್ಷ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದು, ‘ಟಾಟಾ ಗ್ರೂಪ್ ಚೀನಾದ ಮೊಬೈಲ್ ತಯಾರಕ ವಿವೋ ಬದಲಿಗೆ ಮುಂದಿನ ವರ್ಷ ಐಪಿಎಲ್ ಶೀರ್ಷಿಕೆ ಪ್ರಾಯೋಜಕರಾಗಿ ಸ್ಥಾನ ತುಂಬಲಿದೆ’ ಎಂದು ಮಂಗಳವಾರ ತಿಳಿಸಿದ್ದಾರೆ.
ವಿವೋ 2018ರಿಂದ 2022ರ ವರೆಗೆ 5 ವರ್ಷಗಳ ಅವಧಿಗೆ 2200 ಕೋಟಿ ರೂ ನೀಡಿ ಶೀರ್ಷಿಕೆ ಪ್ರಾಯೋಕತ್ವ ಪಡೆದುಕೊಂಡಿತ್ತು. ಆದರೆ, 2020ರಲ್ಲಿ ಗಲ್ವಾನ್ ಗಡಿ ವಿವಾದ ಉಂಟಾಗಿದ್ದರಿಂದಬಿಸಿಸಿಐ ವಿವೋ ಅನ್ನು ಟೈಟಲ್ ಪ್ರಾಯೋಜಕತ್ವದಿಂದ ಅಮಾನತುಗೊಳಿಸಿತ್ತು. 2020ರಲ್ಲಿ ಡ್ರೀಮ್ ಇಲೆವೆನ್ 222 ಕೋಟಿ ರೂ ನೀಡಿ ಟೈಟಲ್ ಪ್ರಯೋಜಕತ್ವ ಪಡೆದುಕೊಂಡಿತ್ತು. ಮತ್ತೆ 2021ರ ಆವೃತ್ತಿಯಲ್ಲಿ ವಿವೋ ಐಪಿಎಲ್ಗೆ ಮರಳಿತ್ತು. ಇದೀಗ ಟಾಟಾ ಗ್ರೂಪ್ 2022 ಮತ್ತು 2023 ರ ಋತುಗಳಿಗೆ ಶೀರ್ಷಿಕೆ ಪ್ರಾಯೋಜಕರಾಗಿ ಉಳಿಯಲಿದೆ.