IPL | ಸೂಪರ್ ಸಂಡೇ ವಿಥ್ RR vs LSG, GT vs MI ಹೈವೋಲ್ಟೇಜ್ ಮ್ಯಾಚ್: ಗೆಲ್ಲೋದ್ಯಾರು? ಸೋಲೋದ್ಯಾರು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಸೂಪರ್ ಸಂಡೆ ಐಪಿಎಲ್‌ನಲ್ಲಿ ಎರಡು ಪ್ರತ್ಯೇಕ ಮ್ಯಾಚ್ ಗಳು ನಡೆಯಲಿವೆ. ದಿನದ ಮೊದಲ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಎರಡನೇ ಪಂದ್ಯದಲ್ಲಿ ಮುಂಬೈ ತಂಡವನ್ನು ಗುಜರಾತ್ ತಂಡ ಎದುರಿಸಲಿದೆ. ಒಟ್ಟಿನಲ್ಲಿ ಐಪಿಎಲ್ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ ನೀಡಲಿದೆ.

ಇಂದಿನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್​, ಲಕ್ನೋ ಸೂಪರ್​ ಜೈಂಟ್ಸ್​​ಗೆ ಸವಾಲೆಸೆದಿದೆ. ಜೈಪುರದಲ್ಲಿ ನಡೆಯೋ ಈ ಮ್ಯಾಚ್, ರಾಜಸ್ಥಾನ್ ಬೌಲಿಂಗ್ ಅಟ್ಯಾಕ್ ಹಾಗೂ ಲಕ್ನೋ ಪವರ್​​​​​​​​​​​​​​​​​​​​​​ ಹಿಟ್ಟರ್​ಗಳ ಕಾದಾಟವಾಗಿದೆ.

ಐಪಿಎಲ್‌ನಲ್ಲಿ ಇನ್ನೆರಡು ದೊಡ್ಡ ಪಂದ್ಯಗಳಿಗೆ ವೇದಿಕೆ ಸಜ್ಜಾಗಿದೆ. ಅಭಿಮಾನಿಗಳಿಗೆ ಎರಡು ಪಟ್ಟು ಖುಷಿಯಾಗುವುದು ಗ್ಯಾರಂಟಿ. ಈ ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ನಾಲ್ಕೂ ತಂಡಗಳು ಉತ್ತಮ ಆರಂಭದ ನಿರೀಕ್ಷೆಯಲ್ಲಿವೆ. ಇದೇ ವೇಳೆ ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಹಣಾಹಣಿ ಗಮನ ಸೆಳೆಯುತ್ತಿದೆ.

ಎರಡು ವರ್ಷಗಳ ಕಾಲ ಗುಜರಾತ್ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಇದೀಗ ಎದುರಾಳಿ ತಂಡದ ನಾಯಕನಾಗಿ ಸ್ಪರ್ಧೆಗೆ ಸೇರಿದ್ದಾರೆ. ಗುಜರಾತ್​ ಹೋಮ್​ಗ್ರೌಂಡ್​ನಲ್ಲಿ ಪಂದ್ಯ ನಡೆಯಲಿದ್ದು, ಗುಜರಾತ್ ಟೈಟಾನ್ಸ್ ತಮ್ಮ ಮಾಜಿ ನಾಯಕನಿಗೆ ತಿರು ಮಂತ್ರದಲ್ಲಿ ಪಾಠ ಕಲಿಸುತ್ತಾರೆಯೇ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!