April 7, 2026
Tuesday, April 7, 2026
spot_img

IPL | ಮುಂಬೈ-ರಾಜಸ್ಥಾನ್ ಪಂದ್ಯಕ್ಕೂ ವರುಣನ ಎಂಟ್ರಿ: ಟಾಸ್ ವಿಳಂಬ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಮತ್ತು ರಾಜಸ್ಥಾನ ಪಂದ್ಯಕ್ಕೂ ವರುಣ ಎಂಟ್ರಿ ನೀಡಿದ್ದು, ಹೀಗಾಗಿ ಪಂದ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ.

ಗುವಾಹಟಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದ್ದು, ಹೀಗಾಗಿ ಟಾಸ್ ಪ್ರಕ್ರಿಯೆಯು ವಿಳಂಬವಾಗಿದೆ. ಮೈದಾನವನ್ನು ಕವರ್​ ಮಾಡಲಾಗಿದೆ.

ಈ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ಆಡಿದ 2 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿದೆ, 4 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ ತಂಡವು ಕೆಕೆಆರ್ ವಿರುದ್ಧದ ಗೆಲುವಿನೊಂದಿಗೆ ಉತ್ತಮವಾಗಿ ಆರಂಭ ಪಡೆದಿತ್ತು. ಆದರೆ ದೆಹಲಿ ವಿರುದ್ಧ ಸೋಲನ್ನು ಅನುಭವಿಸಿದರು, ಇದರಿಂದಾಗಿ ಮುಂಬೈ 2 ಪಂದ್ಯಗಳಿಂದ 2 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !