March 7, 2026
Saturday, March 7, 2026
spot_img

ನೆರೆ ರಾಷ್ಟ್ರಗಳ ಮೇಲೆ ಇನ್ಮುಂದೆ ದಾಳಿ ಮಾಡಲ್ಲ…ಕ್ಷಮೆಯಾಚಿಸಿದ ಇರಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್-ಇಸ್ರೇಲ್ ಅಮೆರಿಕ ಸಂಘರ್ಷದಿಂದ ನೆರೆಹೊರೆಯ ದೇಶಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದ್ದು, ನಿತ್ಯವೂ ಆತಂಕದಲ್ಲಿ ಜೀವನ ಸಾಗುತ್ತಿದೆ. ಇದರ ಬೆನ್ನಲ್ಲೇ, ಇಂದು ಆ ದೇಶಗಳಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅಧಿಕೃತವಾಗಿ ಕ್ಷಮೆಯಾಚಿಸಿದ್ದಾರೆ.

ಇಸ್ರೇಲ್​ ಹಾಗೂ ಅಮೆರಿಕ ವಿರುದ್ಧದ ಪ್ರತಿಕಾರಕ್ಕೆ ಇರಾನ್​, ಅಮೆರಿಕದ ಮಿತ್ರ ದೇಶಗಳಾದ ನೆರೆಯ ಸೌದಿ ಅರೇಬಿಯಾ, ಯುಎಇ ಮತ್ತು ಬಹ್ರೇನ್ ಸೇರಿದಂತೆ 10ಕ್ಕೂ ಅಧಿಕ ರಾಷ್ಟ್ರಗಳ ಮೇಲೆ ದಾಳಿ ಮಾಡಿತ್ತು.

ಇದೀಗ ಇರಾನ್ ದಾಳಿ ಮಾಡಿದ ನೆರೆಯ ರಾಷ್ಟ್ರಗಳಿಗೆ ನಾನು ನನ್ನ ಪರವಾಗಿ ಮತ್ತು ಇರಾನ್ ಪರವಾಗಿ ಕ್ಷಮೆಯಾಚಿಸಬೇಕು. ಆ ದೇಶಗಳಿಂದ ದಾಳಿಯಾಗದಿದ್ದರೆ, ನೆರೆ ರಾಷ್ಟ್ರಗಳ ಮೇಲೆ ಇನ್ಮುಂದೆ ನಾವು ಯಾವುದೇ ದಾಳಿ ಮಾಡಲ್ಲ. ಯಾವುದೇ ಕ್ಷಿಪಣಿಗಳನ್ನು ಹಾರಿಸುವುದಿಲ್ಲ ಎಂದು ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಆದರೆ ಇರಾನ್ ಮೇಲೆ ದಾಳಿ ಮಾಡಿ ತಮ್ಮ ಸರ್ವೋಚ್ಛ ನಾಯಕ ಖಮೆನಿ ಹತ್ಯೆ ಮಾಡಿದ ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ತಮ್ಮ ದೇಶವು ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗೆ ಶರಣಾಗುವುದಿಲ್ಲ ಎಂದೂ ಕಿಡಿಕಾರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !