September 28, 2026
Monday, September 28, 2026
spot_img

ಎನ್‌ಆರ್‌ಪುರದಲ್ಲಿ ಸೇತುವೆ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ: 30 ಕಿಮೀ ಸುತ್ತಾಟ ಈಗ ಮೂರು ಕಿ.ಮೀಗೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎನ್‌ಆರ್‌ಪುರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಸಿದ್ದರಾಮಯ್ಯ ಸೇತುವೆಯನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ.

ಭದ್ರಾ ಹಿನ್ನೀರಿನ ಹಂದೂರು ಬಳಿ ಈ ಸೇತುವೆ ನಿರ್ಮಾಣವಾಗಿದೆ. ಬರೋಬ್ಬರಿ 38 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಇದಾಗಿದೆ. ಕಳೆದ ಆರು ದಶಕಗಳಿಂದ ಸುತ್ತಮುತ್ತಲಿನ ಜನರು ಈ ಸೇತುವೆಗೆ ಬೇಡಿಕೆ ಇಟ್ಟಿದ್ದರು. ಇದೀಗ ಜನರ ಆಸೆ ನೆರವೇರಿದೆ. ಗ್ರಾಮಸ್ಥರು ಸಿಟಿಗೆ ಬರಬೇಕು ಎಂದರೆ ಬರೋಬ್ಬರಿ 30 ಕಿಮೀ ಸುತ್ತಿ ಬರಬೇಕಿತ್ತು. ಆದರೆ ಈಗ ಮೂರು ಕಿಲೋಮೀಟರ್‌ ಬಂದರೆ ಸಾಕು ಸಿಟಿ ಸಿಗಲಿದೆ.

ನರಸಿಂಹರಾಜಪುರದಲ್ಲಿ ಸೇತುವೆ ನಿರ್ಮಾಣ ಬಹುದಿನದ ಬೇಡಿಕೆಯಾಗಿತ್ತು.‌ ಈಗ ನನ್ನ ಅಧಿಕಾರಾವಧಿಯಲ್ಲಿಯೇ ಶಂಕುಸ್ಥಾಪನೆ ಮತ್ತು ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದು ಸಿಎಂ ಹೇಳಿದ್ದಾರೆ.

Must Read