Sunday, December 3, 2023

Latest Posts

ಇರಾನಿ ಕಪ್: ಶೇಷ ಭಾರತ ತಂಡ ಪ್ರಕಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನಿ ಕಪ್ 2023ಗಾಗಿ ಶೇಷ ಭಾರತ ತಂಡವನ್ನು (Rest of India Squad) ಪ್ರಕಟಿಸಲಾಗಿದೆ. 15 ಸದಸ್ಯರ ತಂಡವನ್ನು ಹನುಮ ವಿಹಾರಿ ಮುನ್ನಡೆಸಲಿದ್ದಾರೆ.

ಕಳೆದ ಬಾರಿ ಶೇಷ ಭಾರತ ತಂಡವನ್ನು ಮುನ್ನಡೆಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ ಹಾಗೂ ಕರ್ನಾಟಕದ ಯುವ ವೇಗಿ ವಿಧ್ವತ್ ಕಾವೇರಪ್ಪ 15 ಸದಸ್ಯರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಟೀಮ್ ಇಂಡಿಯಾವನ್ನು ಪ್ರತಿನಿಧಿಸಿರುವ ಕೆಎಸ್ ಭರತ್ ಹಾಗೂ ನವದೀಪ್ ಸೈನಿ ಕೂಡ ಶೇಷ ಭಾರತ ತಂಡದಲ್ಲಿದ್ದಾರೆ. ಇವರ ಜೊತೆಗೆ ಯುವ ದಾಂಡಿಗರಾದ ಸರ್ಫರಾಝ್ ಖಾನ್ ಹಾಗೂ ರೋಹನ್ ಕುನ್ನುಮ್ಮಲ್ ಕೂಡ ಆಯ್ಕೆಯಾಗಿದ್ದಾರೆ. ಅದರಂತೆ ಶೇಷ ಭಾರತ ತಂಡ ಈ ಕೆಳಗಿನಂತಿದೆ

ಶೇಷ ಭಾರತ ತಂಡ: ಹನುಮ ವಿಹಾರಿ (ನಾಯಕ), ಕೆಎಸ್ ಭರತ್, ಮಯಾಂಕ್ ಅಗರ್ವಾಲ್, ಯಶ್ ಧುಲ್, ಶಮ್ಸ್ ಮುಲಾನಿ, ಸಾಯಿ ಸುದರ್ಶನ್, ಸರ್ಫರಾಝ್ ಖಾನ್, ಪುಲ್ಕಿತ್ ನಾರಂಗ್, ಸೌರಭ್ ಕುಮಾರ್, ಯಶ್ ದಯಾಳ್, ನವದೀಪ್ ಸೈನಿ, ವಿಧ್ವತ್ ಕಾವೇರಪ್ಪ, ಆಕಾಶ್ ದೀಪ್, ರೋಹನ್ ಕುನ್ನುಮ್ಮಲ್, ಧ್ರುವ ಜುರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!