ಸಾರ್ವಜನಿಕರ ಆತಂಕ ಹೆಚ್ಚಿಸಿದ ಇರಾನಿ ಗ್ಯಾಂಗ್: 8 ಮನೆಗಳಲ್ಲಿ ಕಳ್ಳತನಕ್ಕೆ ಯತ್ನ

ಹೊಸದಿಗಂತ ವರದಿ,ಹಾಸನ:

ಚಡ್ಡಿ ಬನಿಯಾನ್ ಗ್ಯಾಂಗ್ ಎಂದೇ ಕುಖ್ಯಾತಿ ಪಡೆದಿರುವ ದರೋಡೆಕೋರರ ಗುಂಪು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು ಸಾರ್ವಜನಿಕರ ಆತಂಕವನ್ನು ಹೆಚ್ಚಸಿದೆ.

ಇರಾನಿ ಗ್ಯಾಂಗ್ ಎಂದೂ ಹೇಳಲಾಗುವ ಈ ಗುಂಪಿನವರು ತಿಂಗಳ ಹಿಂದೆ ಅರಸೀಕರೆಯ ಅಲ್ಲಲ್ಲಿ ಕೆಲವು ಕಡೆಗಳಲ್ಲಿ ಕಳ್ಳತನ ಯತ್ನ ನಡೆಸಿದ್ದರು. ಇದೀಗ ತಾಲೂಕಿನ ಚಿಟ್ಟನಹಳ್ಳಿ ಸುತ್ತಮುತ್ತ ಒಂದೇ ದಿನ ಎಂಟು ಮನೆಗಳಲ್ಲಿ ಕಳ್ಳತನಕ್ಕೆ ಯತ್ನ ನಡೆಸಿವೆ. ಈ ದೃಶ್ಯಗಳು ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆಯಾದರೆ ಸಿಕ್ಕಿ ಬೀಳುತ್ತೇವೆ ಎಂಬ ಕಾರಣಕ್ಕೆ ಆ ಬಾಗದ ಕೆಲವು ಸಿ.ಸಿ ಟಿ.ವಿ ಕ್ಯಾಮೆರಾವೊಂದನ್ನು ಈ ಕಿರಾತಕರು ನಾಶಪಡಿಸಿದ್ದಾರೆ.

ಅರೆಬೆತ್ತಲಾಗಿ ಗ್ರಾಮದಲ್ಲಿ ಅಲೆದಾಟ ನಡೆಸಿರುವ ನಾಲ್ವರ ಗ್ಯಾಂಗ್, ಎಂಟು ಮನೆಗಳಲ್ಲಿ ಕಳ್ಳತನ ಯತ್ನ ನಡೆಸಿವೆ. ಈ ಪೈಕಿ ಒಂದು ಮನೆಯ ಸಿಸಿಟಿವಿಯಲ್ಲಿ ಕಳ್ಳರ ಓಡಾಟ ಸೆರೆಯಾಗಿವೆ. ಒಳ ಉಡುಪುಗಳನ್ನು ಮಾತ್ರ ಧರಿಸುವ ಈ ಗುಂಪಿನವರು ಕೈಯಲ್ಲಿ ಮಾರಕಾಸ್ತ್ರ ಹಾಗೂ ಮಣ್ಣು ಹಿಡಿದುಕೊಂಡಿರುತ್ತಾರೆ ಎನ್ನಲಾಗಿದೆ.

ಕೆಲವೇ ದಿನಗಳ ಅಂತರದಲ್ಲಿ ಈ ಗ್ಯಾಂಗ್ ಜಿಲ್ಲೆಯಲ್ಲಿ ರಾತ್ರಿಯಾಟ ಶುರು ಹಚ್ಚಿಕೊಂಡಿರುವ ಸುದ್ದಿ ಕೇಳಿ ಜನರು ಭಯಗೊಂಡಿದ್ದಾರೆ. ವಿಷಯ ತಿಳಿದು ಗ್ರಾಮಾಂತರ ಠಾಣೆ ಪೊಲೀಸರು ಗ್ರಾಮಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!