March 18, 2026
Wednesday, March 18, 2026
spot_img

ಇಸ್ರೇಲ್ ವೈಮಾನಿಕ ದಾಳಿಗೆ ಇರಾನ್ ಗುಪ್ತಚರ ಸಚಿವರ ಹತ್ಯೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ಮೇಲೆ ಮತ್ತೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಈ ವೇಳೆ ಗುಪ್ತಚರ ಇಲಾಖೆಯ ಸಚಿವ ಎಸ್ಮಾಯಿಲ್ ಖತೀಬ್ ಸಾವನ್ನಪ್ಪಿದ್ದಾರೆ.

ಈ ಕುರಿತು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಮಾಹಿತಿ ನೀಡಿದ್ದು, ಟೆಹ್ರಾನ್ ಮೇಲೆ ನಿರಂತರ ದಾಳಿ ನಡೆಸಿದ್ದೇವೆ. ಈ ವೇಳೆ ಸಚಿವ ಎಸ್ಮಾಯಿಲ್ ಖತೀಬ್ ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಈ ಸಾವನ್ನು ದೃಢಪಡಿಸಿದ್ದಾರೆ.

ಎಸ್ಮಾಯಿಲ್ ಖತೀಬ್ ಇರಾನ್ ಗುಪ್ತಚರ ಇಲಾಖೆಯ ಸಚಿವನಾಗಿದ್ದು, ಇತ್ತೀಚೆಗೆ ನಡೆದ ಬಂಧನ ಮತ್ತು ಹತ್ಯೆ ಸಹಿತ ವಿವಿಧ ವಿಚಾರಗಳಲ್ಲಿ ಆತನ ಪಾತ್ರ ಪ್ರಮುಖವಾಗಿತ್ತು. ಜೊತೆಗೆ ಆತ ಓರ್ವ ಶಿಯಾ ಧರ್ಮಗುರು ಆಗಿದ್ದನು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !