ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷ ನಿಲ್ಲುವ ಲಕ್ಷಣ ಗೋಚರಿಸುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಇರಾನ್ ಹಿಂದೂ ಮಹಾಸಾಗರದಲ್ಲಿ ಅಮೆರಿಕ ಮತ್ತು ಯುಕೆ ಮಿಲಿಟರಿ ನೆಲೆಯಿರುವ ಅತ್ಯಂತ ರಹಸ್ಯ ದ್ವೀಪವಾದ ಡಿಯಾಗೋ ಗಾರ್ಸಿಯಾ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ನಡೆಸಿದೆ.
ಈ ಕುರಿತು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದು , ಇರಾನ್ ನಿಂದ ಸುಮಾರು 4,000 ಕಿಲೋಮೀಟರ್ ದೂರ ಹಿಂದೂ ಮಹಾಸಾಗರದಲ್ಲಿ ಇರುವ ಡಿಯಾಗೋ ಗಾರ್ಸಿಯಾ ದ್ವೀಪವನ್ನು ಗುರಿಯಾಗಿಸಿ 2 ಮಧ್ಯಮ ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ ಎಂದು ತಿಳಿಸಿದೆ. ಆದರೆ ಎರಡೂ ಕ್ಷಿಪಣಿಗಳು ತನ್ನ ಗುರಿಯನ್ನು ತಲುಪಲಿಲ್ಲ .
ಇರಾನ್ ಹಿಡಿತದಿಂದ ಹಿರ್ಮುಜ್ ಜಲಸಂಧಿಯನ್ನು ತೆರವುಗೊಳಿಸಲು ಅಮೆರಿಕಕ್ಕೆ ಬೆಂಬಲ ನೀಡುವುದಾಗಿ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಘೋಷಿಸಿದ್ದು, ಇದರ ಬೆನ್ನಿಗೆ ಈ ದಾಳಿ ನಡೆದಿದೆ.



